ಸಾಮಾಜಿಕ ಜಾಲತಾಣದಲ್ಲಿ ಫುಡ್ ವ್ಲಾಗರ್‌ಗಳ ಭರಾಟೆ ಜೋರಾದಂತೆ ಚಿತ್ರವಿಚಿತ್ರ ಫ್ಯೂಶನ್ ಫುಡ್‌ಗಳ ಕಲರವ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಫ್ಯಾಂಟಾ ಮ್ಯಾಗಿ, ಚಾಕ್ಲೆಟ್ ಬಿರಿಯಾನಿ, ಐಸ್ಕ್ರೀಂ ದೋಸೆ…… ಹೀಗೆ ಚಿತ್ರ ವಿಚಿತ್ರವಾದ, ಊಹಿಸಲೂ ಸಾಧ್ಯವಿಲ್ಲದ ಬಗೆಯ ಫ್ಯೂಶನ್ ಫುಡ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಬಂಗಾಳದ ಅತ್ಯಂತ ಜನಪ್ರಿಯ ಸಿಹಿ ತಿನಿಸಾದ ರೊಶೊಗೊಲ್ಲಾಗೆ ಇಂಥದ್ದೊಂದು ವಿಚಿತ್ರ ಟ್ವಿಸ್ಟ್ ಕೊಟ್ಟು, ರೊಶೊಗೊಲ್ಲ ರೋಲ್ ಮಾಡಿರುವ ವಿಚಾರ ಸಖತ್ ಸುದ್ದಿಯಲ್ಲಿದೆ.
ರೊಶೊಗೊಲ್ಲಗಳನ್ನು ಸಾಸ್‌ನೊಂದಿಗೆ ಬೆರೆಸಿ, ಪರಾಠಾದೊಳಗೆ ನೇರವಾಗಿ ಜೋಡಿಸಿ, ಮೇಲೊಂದಿಷ್ಟು ತರಕಾರಿ ಹಾಕಿ ಸುತ್ತಿ ರೋಲ್ ಮಾಡುತ್ತಿರುವ ವಿಡಿಯೋ ನೋಡಿದ ನೆಟ್ಟಿಗರು, ’ಹೀಗೂ ಉಂಟೇ!’ ಎಂದು ಹೌಹಾರಿದ್ದಾರೆ.
ಸಿಹಿ ಪಾಕದಲ್ಲಿ ಅದ್ದಿರದ ರೊಶೊಗೊಲ್ಲ ಬಳಸುವ ಕಾರಣ ಅವುಗಳು ಪನೀರ್‌ನಂತೆ ರುಚಿಸುತ್ತವೆ. ಹೀಗಾಗಿ ಈ ರೋಲ್‌ಗಳು ಪನೀರ್ ರೋಲ್‌ಗಳ ಹಾಗೆಯೇ ಇರುತ್ತವೆ ಎಂದು ಈ ವಿಡಿಯೋ ಪೊಸ್ಟ್ ಮಾಡಿದ ವ್ಲಾಗರ್ ವಿವರಿಸಿದ್ದಾರೆ.