ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದಲ್ಲಿ ವಯಸ್ಸಾದ ಲಕ್ಷಣಗಳು ಗೋಚರಿಸಲು ಆರಂಭಿಸುತ್ತವೆ. ಹೀಗಾಗದಂತೆ ಮಾಡಲು ಅಂದರೆ ನೀವು ಸದಾ ಕಾಲ ಯಂಗ್ ಹಾಗೂ ಎನರ್ಜೆಟಿಕ್ ಆಗಿ ಕಾಣಿಸಬೇಕೆಂದಿದ್ದರೆ ಹೀಗೆ ಮಾಡಿ.
ಭಾರ ಎತ್ತುವ ಕೆಲಸಕ್ಕೆ ಬೈ ಹೇಳಿ. ಇದರಿಂದ ಮುಖದ ಸ್ನಾಯುಗಳು ಸಡಿಲಗೊಳ್ಳುತ್ತವೆ. ನೆರಿಗೆಗಳು ಮೂಡುತ್ತವೆ ಮಾತ್ರವಲ್ಲ ನಿಮ್ಮ ವಯಸ್ಸು ಹೆಚ್ಚಾದಂತೆ ಕಾಣಿಸುತ್ತದೆ. ಇದನ್ನು ತಪ್ಪಿಸಲು ನೀವು ವೆಯ್ಟ್ ಲಿಫ್ಟಿಂಗ್ ಕೆಲಸಗಳಿಗೆ ಬೈ ಬೈ ಹೇಳಲೇಬೇಕು.
ಉಪ್ಪು ಸಕ್ಕರೆಯನ್ನು ವಿಪರೀತ ಸೇವಿಸುವುದರಿಂದಲೂ ದೇಹ ಹಲವು ರೋಗಗಳ ಗೂಡಾಗುತ್ತದೆ. ಉಪ್ಪು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಲೂ ನಿಮಗೆ ವಯಸ್ಸಾದಂತೆ ಕಾಣುತ್ತದೆ.
ವೈದ್ಯರು ಪವರ್ ಗ್ಲಾಸ್ ಬಳಸಲು ಸೂಚಿಸಿದ್ದರೆ ಅದನ್ನು ತಪ್ಪಿಸದಿರಿ. ಇಲ್ಲವಾದರೆ ನಿಮ್ಮ ಕಣ್ಣಿನ ಸುತ್ತಲಿನ ಸ್ನಾಯುಗಳಿಗೆ ಹೆಚ್ಚಿನ ಆಯಾಸವಾಗಿ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲಗಳು ಹಾಗೂ ಸುಕ್ಕು ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೊತ್ತು ಟಿವಿ, ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್ ದೃಷ್ಟಿಸುವುದು ಕೂಡಾ ಒಳ್ಳೆಯದಲ್ಲ.