alex Certify ವರ್ಗಾವಣೆಗೊಂಡ ಶಾಲಾ ಶಿಕ್ಷಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಗಾವಣೆಗೊಂಡ ಶಾಲಾ ಶಿಕ್ಷಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಬೆಂಗಳೂರು :  ಪ್ರಸ್ತುತ ಸಾಲಿನಲ್ಲಿ ವರ್ಗಾವಣೆ ಪಡೆದು ಕರ್ತವ್ಯದಿಂದ ಬಿಡುಗಡೆಗೊಂಡಿರುವ ಶಿಕ್ಷಕರ TRANSFER IN/OUT ವಿವರಗಳನ್ನು EEDS ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿ ಅಂತಿಮಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಇಇಡಿಎಸ್ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ದಿನಾಂಕ:15/09/2023 ರೊಳಗೆ ಗಣಕೀಕರಿಸಿ ಅಂತಿಮಗೊಳಿಸಲು ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿತ್ತು.

ಆದಾಗ್ಯೂ, ಇಇಡಿಎಸ್‌ ತಂತ್ರಾಂಶದಿಂದ ಪಡೆಯಲಾದ ವರದಿಗಳನ್ನು ಪರಿಶೀಲಿಸಿದಾಗ ಇನ್ನೂ 4,000 ಕ್ಕೂ ಹೆಚ್ಚು ಶಿಕ್ಷಕರ TRANSFER IN/OUT ವಿವರಗಳನ್ನು EEDS ತಂತ್ರಾಂಶದಲ್ಲಿ ಗಣಕೀಕರಿಸದೇ ಇರುವುದು ಕಂಡುಬಂದಿರುತ್ತದೆ (ಜಿಲ್ಲಾವಾರು ಬಾಕಿ ಇರುವ ಪ್ರಕರಣಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದೆ).

ಆದ್ದರಿಂದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಈ ಬಗ್ಗೆ ತುರ್ತು ಗಮನ ನೀಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವರ್ಗಾವಣೆ ಪಡೆದು ಬಿಡುಗಡೆಯಾಗಿ ನಿಯುಕ್ತಿಗೊಳಿಸಲಾದ ಹುದ್ದೆಯಲ್ಲಿ ಕರ್ತವ್ಯದ ಮೇಲೆ ಹಾಜರಾದ ಶಿಕ್ಷಕರ TRANSFER IN/OUT ಹಾಗೂ ಇನ್ನು ಮುಂತಾದ ಇತ್ತೀಚಿನ ಸೇವಾ ವಿವರಗಳನ್ನು ಇಇಡಿಎಸ್ ತಂತ್ರಾಂಶದಲ್ಲಿ ದಿನಾಂಕ:- 18/10/2023 ರೊಳಗೆ ಗಣಕೀಕರಿಸಿ ಅಂತಿಮಗೊಳಿಸುವುದು. ಹಾಗೂ ಈ ಬಗ್ಗೆ ಯಾವುದೇ ಉದಾಸೀನತೆಗೆ ಅವಕಾಶವಿರುವುದಿಲ್ಲ ಒಂದು ವೇಳೆ ಈ ಬಗ್ಗೆ ಯಾವುದಾದರೂ ತಾಂತ್ರಿಕ ತೊಡಕುಗಳು ಕಂಡು ಬಂದಲ್ಲಿ ಕೂಡಲೇ ಈ ಕಛೇರಿಯ ಇ-ಮೇಲ್ karonlineserviceshelp@gmail.com ಗೆ ಪತ್ರ ರವಾನಿಸಿ ಖುದ್ದು ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳಲು ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...