ಹವಾಮಾಣ ಬದಲಾವಣೆಯ ಕಳಕಳಿ ಎಲ್ಲೆಡೆ ಹೆಚ್ಚಾಗುತ್ತಿರುವ ನಡುವೆ ಇಂಗಾಲದ ಹೊರಸೂಸುವಿಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಎಲ್ಲೆಡೆ ಪ್ರಯತ್ನಗಳು ಜಾರಿಯಲ್ಲಿವೆ.
ಪೆಟ್ರೋಲ್/ಡೀಸೆಲ್‌ನಂಥ ಪಳೆಯುಳಿಕೆ ಇಂಧನದ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಇದೀಗ ಬೇಡಿಕೆ ಹೆಚ್ಚಾಗುತ್ತಿದೆ. ಪಳೆಯುಳಿಕೆ ಇಂಧನಗಳ ಬೆಲೆಗಳೂ ಹೆಚ್ಚುತ್ತಿರುವುದು ಸಹ ಇದಕ್ಕೆ ಕಾರಣವಾಗಿದೆ. ಆದರೆ ನಿಮ್ಮ ಬಳಿ ಅದಾಗಲೇ ಪೆಟ್ರೋಲ್/ಡೀಸೆಲ್ ಚಾಲಿತ ವಾಹನಗಳಿದ್ದರೆ ಅವುಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೂಡಿಕೆ ಮಾಡುವುದು ಭಾರೀ ಚಿಂತೆ ಮಾಡಬೇಕಾದ ವಿಚಾರವೇ ಸರಿ.
ʼಹೌಸ್ ವೈಫ್ʼ ಗೆ ಇಲ್ಲಿದೆ ತೂಕ ಇಳಿಸಿಕೊಳ್ಳುವ ಟಿಪ್ಸ್
ನಿಮ್ಮ ಬಳಿ ಇರುವ ಪಳೆಯುಳಿಕೆ ಇಂಧನದ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆ ಮಾಡುವ ಕಂಪನಿಗಳೂ ಇದ್ದು, ಇದಕ್ಕಾಗಿ 4-5 ಲಕ್ಷ ರೂಪಾಯಿಯಷ್ಟು ವೆಚ್ಚವಾಗುತ್ತದೆ. ಮೋಟರ್‌ಗಳ ವ್ಯಾಟ್ ಶಕ್ತಿ ಮತ್ತು ಅಳವಡಿಸಲ್ಪಡುವ ಬ್ಯಾಟರಿಯ ಸಾಮರ್ಥ್ಯದ ಮೇಲೆ ಈ ಬೆಲೆ ನಿರ್ಧಾರವಾಗುತ್ತದೆ. 12 ಕಿವ್ಯಾ ಲಿಥಿಯಂ ಬ್ಯಾಟರಿ ಮತ್ತು 20ಕಿವ್ಯಾ ಎಲೆಕ್ಟ್ರಿಕ್ ಮೋಟರ್‌ಗೆ 4 ಲಕ್ಷ ರೂ.ಗಳ ಬೆಲೆ ಇದೆ.
ಈ ಪರಿವರ್ತನೆ ವೇಳೆ ಇಂಧನ ಟ್ಯಾಂಕ್, ಇಂಜಿನ್, ಮತ್ತು ಇಂಜಿನ್‌ಗೆ ಕೇಬಲ್ ಡೆಲಿವರಿಂಗ್ ಪವರ್‌ಗಳನ್ನು ತೆಗೆದು ಎಲೆಕ್ಟ್ರಿಕ್ ಭಾಗಗಳಾದ ರೋಲರ್, ಕಂಟ್ರೋಲರ್, ಮೋಟರ್, ಬ್ಯಾಟರಿ ಮತ್ತು ಬ್ಯಾಟರಿ ಚಾರ್ಜರ್ ಗಳನ್ನು ಅಳವಡಿಸಲಾಗುತ್ತದೆ. ಇಡೀ ಕ್ರಿಯೆಗೆ 7 ದಿನಗಳು ತಗುಲಬಹುದು.
ಪೆಟ್ರೋಲ್/ಡೀಸೆಲ್ ಬದಲಿಗೆ ಎಲೆಕ್ಟ್ರಿಕ್ ಚಾಲಿತವಾಗಿ ವಾಹನವನ್ನು ಚಲಿಸಿದಾಗ ಆಗಲಿರುವ ವೆಚ್ಚಗಳ ಬದಲಾವಣೆಗೆ ಟಾಟಾ ನೆಕ್ಸಾನ್‌ನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನೆಕ್ಸಾನ್‌ನ ಎಲೆಕ್ಟ್ರಿಕ್ ವರ್ಶನ್ ಅನ್ನು ಡಿಸೆಂಬರ್ 2019ರಲ್ಲಿ ಪರಿಚಯಿಸಲಾಯಿತು. ಪೆಟ್ರೋಲ್ ಇಂಜಿನ್‌ನ ನೆಕ್ಸಾನ್ 16 ಕಿಮೀ/ಲೀ ಮೈಲೇಜ್ ಕೊಟ್ಟರೆ, ಡೀಸೆಲ್ ಚಾಲಿತ ನೆಕ್ಸಾನ್ 22ಕಿಮೀ/ಲೀನಂತೆ ಓಡುತ್ತದೆ. ಪೆಟ್ರೋಲ್ ಬೆಲೆ 100 ರೂ ಎಂದು ಲೆಕ್ಕ ಹಾಕಿದರೆ, ಪ್ರತಿ ಕಿಮೀಗೆ 6.25ರೂ. ತಗುಲಿದರೆ, ಡೀಸೆಲ್ ಬೆಲೆ 95 ರೂ/ಲೀನಂತೆ ತೆಗೆದುಕೊಂಡರೆ ಒಂದು ಕಿಮೀ ಚಲಿಸಲು ನೆಕ್ಸಾನ್ 4.31ರೂಪಾಯಿಗಳನ್ನು ಖರ್ಚು ಮಾಡಿಸುತ್ತದೆ.
ಇದೇ ಎಲೆಕ್ಟ್ರಿಕ್ ವರ್ಶನ್‌ನ ನೆಕ್ಸಾನ್ ಪರಿಗಣಿಸೋಣ. ವಿದ್ಯುತ್‌ನ ಒಂದು ಯುನಿಟ್‌ಗೆ 6 ರೂ. ಎಂದು ಲೆಕ್ಕ ಹಾಕಿದರೂ, ಒಂದು ಬಾರಿ ಬ್ಯಾಟರಿಯನ್ನು ಪೂರ್ಣವಾಗಿ ಚಾರ್ಜ್ ಮಾಡಲು 181.2 ರೂ. ಖರ್ಚಾಗುತ್ತದೆ. ಹೀಗೆ ಮಾಡಿದಲ್ಲಿ ನೆಕ್ಸಾನ್ 300 ಕಿಮೀಗಳವರೆಗೂ ಓಡಬಲ್ಲದು. ಹೀಗಾದಲ್ಲಿ ಒಂದು ಕಿಮೀ ಓಡಲು ನೆಕ್ಸಾನ್ 60 ಪೈಸೆಯನ್ನಷ್ಟೇ ವ್ಯಯಿಸುತ್ತದೆ.