ಸ್ಮಾರ್ಟ್‍ಫೋನ್ ಗಳ ಬಳಕೆ ಹೆಚ್ಚಾದಂತೆ ಅವುಗಳನ್ನು ದಿನದ 24 ಗಂಟೆಗಳ ಕಾಲ ಚಾಲ್ತಿಯಲ್ಲಿರುವಂತೆ ಕಾಪಾಡಿಕೊಳ್ಳುವುದು ಸವಾಲಾಗಿ ಹೋಗಿದೆ. ಚಾರ್ಜ್ ಇಳಿಯುತ್ತಲೇ ಇರುತ್ತದೆ, ಹಾಗಾಗಿ ಹೋದಲ್ಲೆಲ್ಲ ಚಾರ್ಜರ್ ಅಥವಾ ಕೇಬಲ್ ಅಥವಾ ಪವರ್ ಬ್ಯಾಂಕ್ ಗಳನ್ನು ಕೊಂಡೊಯ್ಯುವವರ ಸಂಖ್ಯೆ ಹೆಚ್ಚುತ್ತಿದೆ.
ಅದರ ಜತೆಗೆ ಈಗ ಟೈಪ್-ಸಿ, ಯುಎಸ್‍ಬಿ, ಮೈಕ್ರೊ ಯುಎಸ್‍ಬಿ, ಲೈಟ್ನಿಂಗ್ ಕೇಬಲ್‍ಗಳ ತಲೆನೋವು ಬೇರೆಯದ್ದೇ ರೀತಿಯಲ್ಲಿ ಬಾಧಿಸುತ್ತಿದೆ.
ಇನ್ನು ಕೆಲವೇ ವರ್ಷಗಳಲ್ಲಿ ವೈರ್‍ಗಳೇ ಇಲ್ಲದೆಯೇ ಸ್ಮಾರ್ಟ್‍ಫೋನ್ ಚಾರ್ಜ್ ಮಾಡುವ ಯುಗ ಆರಂಭಗೊಳ್ಳುವುದು ನಿಶ್ಚಿತ. ‘ವೈರ್‍ಲೆಸ್ ಚಾರ್ಜಿಂಗ್’ ಈಗಾಗಲೇ ಐಟಿ ಹಾಗೂ ಸ್ಮಾರ್ಟ್‍ಫೋನ್ ತಯಾರಿಕೆ ಕಂಪನಿಗಳು ಸಿದ್ಧತೆ ಮಾಡಿಕೊಂಡಿವೆ. ಈ ತಂತ್ರಜ್ಞಾನದ ಹೆಸರು ‘ಕ್ಯುಐ’ ವೈರ್‍ಲೆಸ್.
ಚಾರ್ಜ್ ವೈಯರ್ ನ್ನು ಬಳಸಿ ಮಡಚಿಡದೆ ಹಾಗೇ ಬಿಟ್ಟರೆ ಮನೆಯಲ್ಲಿ ಈ ಸಮಸ್ಯೆ ಎದುರಾಗುವುದು ಖಂಡಿತ
ಪ್ರಾಯೋಗಿಕವಾಗಿ ಇಂತ ಚಾರ್ಜಿಂಗ್ ತಂತ್ರಜ್ಞಾನವನ್ನು ಐಷಾರಾಮಿ ಕಾರುಗಳಲ್ಲಿ ಮಾತ್ರವೇ ನೀಡಲಾಗಿದೆ. ಹಾಗಿದ್ದೂ ವಿಶ್ವಾದ್ಯಂತ ಕಳೆದ ವರ್ಷ 1 ಕೋಟಿ ಜನರು ವೈರ್‍ಲೆಸ್ ಚಾರ್ಜಿಂಗ್ ಬಳಸಿ, ಅದಕ್ಕೆ ಮಾರುಹೋಗಿದ್ದಾರೆ.