
ಈ ಸಂಖ್ಯೆಯನ್ನು ಹಳೆಯ ಖಾತೆಗಳನ್ನು ರದ್ದುಗೊಳಿಸಿ ಹೊಸ ಖಾತೆಗಳಿಗೆ ವರ್ಗಾವಣೆಯಾಗಲು ಬಳಸಲಾಗುವುದು. ಇಪಿಎಫ್ಓ ಆನ್ಲೈನ್ ಸೇವೆಗಳ ಪ್ರಯೋಜನ ಪಡೆಯಲು ಉದ್ಯೋಗಿಯ ಕೆವೈಸಿ ಮಾಹಿತಿಯೊಂದಿಗೆ ಸಾರ್ವತ್ರಿಕ ಖಾತೆ ಸಂಖ್ಯೆಯನ್ನು ಲಿಂಕ್ ಮಾಡಬೇಕು.
ರೋಗಿ ಹೊಟ್ಟೆಯೊಳಗಿದ್ದ ವಸ್ತುಗಳನ್ನು ನೋಡಿ ದಂಗುಬಡಿದ ವೈದ್ಯರು…!
ಒಂದು ವೇಳೆ ನಿಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ ಮರೆತು ಹೋಗಿದ್ದರೆ ಈ ಹಂತಗಳ ಮೂಲಕ ಅದನ್ನು ಪಡೆದುಕೊಳ್ಳಬಹುದಾಗಿದೆ.
1. ಇಪಿಎಫ್ಓದ ಅಧಿಕೃತ ಪೋರ್ಟಲ್ಗೆ ಭೇಟಿ ಕೊಟ್ಟು, know your UAN ಮೇಲೆ ಕ್ಲಿಕ್ ಮಾಡಿ.
2. ಇಪಿಎಫ್ಗೆ ಲಿಂಕ್ ಮಾಡಿದ ನಿಮ್ಮ ಮೊಬೈಲ್ ಸಂಖ್ಯೆ ಎಂಟರ್ ಮಾಡಿ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ.
3. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರಲಿದೆ.
4. ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.
5. ನಿಮ್ಮ ಆಧಾರ್, ಪಾನ್ ಹಾಗೂ ಗುರುತಿನ ಸಂಖ್ಯೆಯನ್ನು ಎಂಟರ್ ಮಾಡಿ.
6. show my UAN ಮೇಲೆ ಕ್ಲಿಕ್ ಮಾಡಿ.
7. ಸ್ಕ್ರೀನ್ ಮೇಲೆ ನಿಮ್ಮ ಯುಎಎನ್ ಸಂಖ್ಯೆ ಬರುವುದು.
ವಯಸ್ಕರ ಈ ಐಸ್ ಕ್ರೀಂನಲ್ಲಿದೆ ನಶೆಯ ಗಮ್ಮತ್ತು…..!
ಒಂದು ವೇಳೆ ನಿಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ ಇನ್ನೂ ನಿಷ್ಕ್ರಿಯವಾಗಿದ್ದಲ್ಲಿ ಹೀಗೆ ಮಾಡುವ ಮೂಲಕ ಸಕ್ರಿಯಗೊಳಿಸಬಹುದು:
1. ಇಪಿಎಫ್ಓನ ಅಧಿಕೃತ ಪೋರ್ಟಲ್ಗೆ ಲಾಗಿನ್ ಆಗಿ.
2. ಸಾರ್ವತ್ರಿಕ ಖಾತೆ ಸಂಖ್ಯೆ, ಸದಸ್ಯರ ಸಂಖ್ಯೆ, ಆಧಾರ್ ಅಥವಾ ಪಾನ್ ಸಂಖ್ಯೆಗಳ ನಡುವೆ ನೀವು ಆಯ್ಕೆ ಮಾಡಿಕೊಳ್ಳಬೇಕು.
3. ಹೆಸರು, ಜನ್ಮ ದಿನಾಂಕಗಳಂಥ ವೈಯಕ್ತಿಕ ವಿವರಗಳನ್ನು ಸಲ್ಲಿಸಲು ಕೇಳಲಾಗುತ್ತದೆ.
4. ಕ್ಯಾಪ್ಚಾ ಕೋರ್ಡ್ ನಮೂದಿಸಿ.
5. ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಗೆ ಬಂದ ಓಟಿಪಿ ಎಂಟರ್ ಮಾಡಿ.
6. ಓಟಿಪಿ ಸಿಂಧುಗಳಿಸಿ, ಸಾರ್ವತ್ರಿಕ ಖಾತೆ ಸಂಖ್ಯೆ ಸಕ್ರಿಯಗೊಳಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
7. ನಿಮ್ಮ ಯುಎಎನ್ ಸಂಖ್ಯೆ ಸಕ್ರಿಯವಾಗಿ ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಗೆ ಪಾಸ್ವರ್ಡ್ ಕಳುಹಿಸಲಾಗುತ್ತದೆ.