ಬೇಕಾಗುವ ಪದಾರ್ಥಗಳು : ಹೆಚ್ಚಿದ ಟೋಫು ಪೀಸ್ ಗಳು- 10, ಸ್ವೀಟ್ ಕಾರ್ನ್- 1/2 ಕಪ್, ಕಾಳು ಮೆಣಸಿನ ಪುಡಿ- 1 ಚಮಚ, ಗರಂ ಮಸಾಲ ಪುಡಿ- 1ಚಮಚ, ಹೆಚ್ಚಿದ ಟೊಮಾಟೋ- 1 ಕಪ್, ಹೆಚ್ಚಿದ ಈರುಳ್ಳಿ- 1/2 ಕಪ್, ಸಣ್ಣಗೆ ಹೆಚ್ಚಿದ ಕ್ಯಾರೆಟ್- 1/2 ಕಪ್, ಹಸಿಮೆಣಸಿನಕಾಯಿ- 2, ಕಾರ್ನ್ ಫ್ಲೋರ್- 3ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್- 1ಚಮಚ, ಜೀರಿಗೆ- 1ಚಮಚ, ಕೊತ್ತಂಬರಿ ಸೊಪ್ಪು- 4 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ : ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ ಸಿಡಿಸಿ ಇದಕ್ಕೆ ಹೆಚ್ಚಿದ ಈರುಳ್ಳಿ, ಟೊಮಾಟೊ, ಹಸಿಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ ಬಾಡಿಸಿ ಆರಿದ ಮೇಲೆ ರುಬ್ಬಿಡಿ.
ಬಾಣಲೆಗೆ 4 ಚಮಚ ಬೆಣ್ಣೆ ಹಾಕಿ ಬಿಸಿ ಆದ ಕೂಡಲೆ ಕಾರ್ನ್ ಫ್ಲೋರ್, ಟೋಫು, ಈರುಳ್ಳಿ, ಕ್ಯಾರೆಟ್, ಟೊಮಾಟೋ, ಉಪ್ಪು, ಹಸಿಮೆಣಸು, ಕಾಳು ಮೆಣಸು ಪುಡಿ, ಗರಂ ಮಸಾಲ ಒಂದೊಂದಾಗಿ ಸೇರಿಸಿ ಫ್ರೈ ಮಾಡಿ ನಂತರ ರುಬ್ಬಿದ ಮಸಾಲ ಮತ್ತು ನೀರಿನಲ್ಲಿ ಕಲಸಿ ಪೇಸ್ಟ್ ಮಾಡಿಕೊಂಡ ಕಾರ್ನ್ ಫ್ಲೋರ್ ಸೇರಿಸಿ ಕುದಿಸಿ. ಸ್ವಲ್ಪ ನೀರು ಸೇರಿಸಿ ಗ್ರೇವಿಯ ಹದಕ್ಕೆ ಬಂದಾಗ ಫ್ರೆಶ್ ಕ್ರೀಂ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಕುದಿಸಿ ಇಳಿಸಿ. ಈಗ ರೆಡಿಯಾದ ಟೋಫು ಕರಿ, ಚಪಾತಿ, ನಾನ್ ಇತ್ಯಾದಿಗಳ ಜೊತೆ ಸವಿಯಲು ಬಹಳ ರುಚಿ.