alex Certify ಇಲ್ಲಿದೆ ರುಚಿಯಾದ ‘ಅಕ್ಕಿ ಶ್ಯಾವಿಗೆ’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರುಚಿಯಾದ ‘ಅಕ್ಕಿ ಶ್ಯಾವಿಗೆ’ ಮಾಡುವ ವಿಧಾನ

Rice Vermicelli Upma | Rice Sevai Upma | Shavige Upma | Vanita's Corner -  YouTube

ಬೇಕಾಗಿರುವ ಸಾಮಗ್ರಿಗಳು :

ಅಕ್ಕಿ ಶ್ಯಾವಿಗೆ : 250 ಗ್ರಾಂ

ಸಣ್ಣಗೆ ಹೆಚ್ಚಿದ ಎಲೆಕೋಸು : 2 ಕಪ್

ಸಣ್ಣಗೆ ಹೆಚ್ಚಿದ ದಪ್ಪ ಮೆಣಸಿನಕಾಯಿ : 1 ಕಪ್

ಹೆಚ್ಚಿದ ಕ್ಯಾರೆಟ್ : 1 ಕಪ್

ಹೆಚ್ಚಿದ ಈರುಳ್ಳಿ –  2

ಬೆಳ್ಳುಳ್ಳಿ : 3-4

ಹಸಿಮೆಣಸಿನಕಾಯಿ : 6-7

ಉಪ್ಪು : ರುಚಿಗೆ ತಕ್ಕಷ್ಟು

ಒಗ್ಗರಣೆಗೆ : 3 ಚಮಚ ಎಣ್ಣೆ, ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ ಸ್ವಲ್ಪ

ಮಾಡುವ ವಿಧಾನ : ಮೊದಲು ಬೆಚ್ಚಗಿನ ನೀರಿನಲ್ಲಿ 5 ನಿಮಿಷ ಶ್ಯಾವಿಗೆಯನ್ನು ನೆನೆಸಿಡಿ. ನಂತರ ನೀರನ್ನು ಬಸಿದು ಶ್ಯಾವಿಗೆಯನ್ನು ಪಕ್ಕಕ್ಕಿಡಿ. ನಂತರ ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಇದಕ್ಕೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ.

ಅದೇ ಬಾಣಲೆಗೆ ಹೆಚ್ಚಿದ ಈರುಳ್ಳಿ, ದಪ್ಪ ಮೆಣಸಿನಕಾಯಿಯನ್ನು ಹಾಕಿ ಹುರಿಯಿರಿ. ಇದಕ್ಕೆ ಹೆಚ್ಚಿದ ಕ್ಯಾರೆಟ್ ಅನ್ನು ಸೇರಿಸಿ, ಸ್ವಲ್ಪ ಬೇಯುವವರೆಗೆ ಫ್ರೈ ಮಾಡಿ. ನಂತರ ಈ ಮಿಶ್ರಣಕ್ಕೆ  ಬಸಿದುಕೊಂಡಿರುವ ಶ್ಯಾವಿಗೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಕೊನೆಯಲ್ಲಿ ನಿಂಬೆಹಣ್ಣಿನ ರಸವನ್ನು ಸೇರಿಸಿ ಸರ್ವ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...