ಕೆಲವು ಮಕ್ಕಳು ಹುಟ್ಟಿನಿಂದಲ್ಲೇ ಕಣ್ಣಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಕೆಲವು ಮಕ್ಕಳು ಮೊಬೈಲ್, ಟಿವಿ ನೋಡಿ ಕಣ್ಣಿನ ಸಮಸ್ಯೆಗೆ ಒಳಗಾಗಿರುತ್ತಾರೆ. ಕಾಲಾಂತರದಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತದೆ. ನಿಮ್ಮ ಮಕ್ಕಳಲ್ಲಿಯೂ ಈ ಸಮಸ್ಯೆ ಇದೆಯೇ? ಎಂಬುದನ್ನು ಈ ಲಕ್ಷಣಗಳ ಮೂಲಕ ತಿಳಿಯಿರಿ.
ನಿಮ್ಮ ಮಗು ಟಿವಿಯನ್ನು ಹತ್ತಿರದಿಂದ ವೀಕ್ಷಿಸಲು ಶುರುಮಾಡಿದರೆ ಅವರಿಗೆ ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆಯಿದೆ ಎಂಬುದನ್ನು ತಿಳಿಯಿರಿ. ಅವರಿಗೆ ಕಣ್ಣು ಸರಿಯಾಗಿ ಕಾಣಿಸದ ಕಾರಣ ಹತ್ತಿರದಿಂದ ಟಿವಿ ನೋಡುತ್ತಾರೆ.
ನಿಮ್ಮ ಮಗು ಏನನ್ನಾದರೂ ನೋಡುವಾಗ ಒಂದು ಕಣ್ಣನ್ನು ಪದೇ ಪದೇ ಮುಚ್ಚುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಇದರು ಅವರು ದೃಷ್ಟಿಯಲ್ಲಿ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ.
ನಿಮ್ಮ ಮಗು ಓದುವಾಗ ಎಲ್ಲಿಯವರೆಗೆ ಓದಿದೆ ಎಂದು ಮರೆತುಬಿಡುತ್ತಿದ್ದರೆ ಅಥವಾ ಚಿಕ್ಕವರಿದ್ದಾಗ ಪುಸ್ತಕದಲ್ಲಿರುವ ಅಕ್ಷರಗಳ ಮೇಲೆ ಬೆರಳಿಟ್ಟು ಓದುವುದು ಸಹಜ. ಆದರೆ ಅದನ್ನೇ ಅವರು ಮುಂದುವರಿಸಿಕೊಂಡು ಹೋದರೆ ಅವರ ಕಣ್ಣಿನಲ್ಲಿ ಸಮಸ್ಯೆ ಇದೆ ಎಂದು ತಿಳಿಯಿರಿ.
ಹಾಗೇ ಮಗುವಿಗೆ ಚಿಕ್ಕ ವಯಸ್ಸಿನಲ್ಲಿ ತಲೆನೋವು ಅಥವಾ ತಲೆತಿರುಗುವಿಕೆಯಂತಹ ಸಮಸ್ಯೆಗಳಿದ್ದರೆ ಅವರ ದೃಷ್ಟಿಯಲ್ಲಿ ಸಮಸ್ಯೆ ಎಂದು ಅರಿಯಿರಿ.
ಮಗು ಪದೇ ಪದೇ ಕಣ್ಣನ್ನು ಉಜ್ಜುತ್ತಿದ್ದರೆ ಮತ್ತು ಕಣ್ಣಿನಲ್ಲಿ ನೀರು ಸುರಿಯುತ್ತಿದ್ದರೆ ಅವರ ಕಣ್ಣಿನಲ್ಲಿ ಸಮಸ್ಯೆ ಇರುವುದರ ಲಕ್ಷಣವಂತೆ.
ನಿಮ್ಮ ಮಕ್ಕಳಲ್ಲಿಯೂ ಈ ಮೇಲಿನ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಕಣ್ಣಿನ ತಜ್ಞರ ಬಳಿ ಪರೀಕ್ಷಿಸಿ.