ಪ್ರತಿದಿನದ ಹಣದ ವಹಿವಾಟಿನಲ್ಲಿ ಪ್ಯಾನ್ ಕಾರ್ಡ್ ಅಗತ್ಯತೆ ಹೆಚ್ಚಾಗುತ್ತಿದೆ. ಆಧಾರ್ ಕಾರ್ಡ್ ರೀತಿಯಲ್ಲೇ ಗುರುತಿನ ನಿಖರ ದಾಖಲೆಯಾಗಿ ಪ್ಯಾನ್ ಕಾರ್ಡ್ ಕೂಡ ವ್ಯಾಪಾರ, ಹೂಡಿಕೆಯ ಭಾಗವಾಗುತ್ತಿದೆ.
10 ಅಂಕಿಗಳ ಈ ಆಲ್ಫಾನ್ಯುಮರಿಕ್ ಸಂಖ್ಯೆಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹಾಗಾಗಿ 15 ವರ್ಷ ಮೇಲ್ಪಟ್ಟವರಿಂದ ಆರಂಭಿಸಿ ವೃದ್ಧರವರೆಗೆ ಎಲ್ಲರೂ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಾರೆ.
ಅಂದ ಹಾಗೆ, ಆಧಾರ್ ಕಾರ್ಡ್ ಇದ್ದವರು ಪ್ಯಾನ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲೇ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇನ್‌ಸ್ಟೆಂಟ್ ಪ್ಯಾನ್ ಎಂದು ಇದನ್ನು ಕರೆಯಲಾಗುತ್ತದೆ. ಆಧಾರ್ ಕಾರ್ಡ್‌ನ ಮಾಹಿತಿಗಳನ್ನು ಆಧರಿಸಿ ’ಇ-ಪ್ಯಾನ್’ ನೀಡಲಾಗುತ್ತದೆ.
SHOCKING: ಆಡುವಾಗಲೇ ಕಾದಿತ್ತು ದುರ್ವಿದಿ: ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ಬಾಲಕ ಸಾವು
ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ, ಮೊದಲು ಆದಾಯ ತೆರಿಗೆ ಹೊಸ ವೆಬ್‌ಸೈಟ್‌ಗೆ ಭೇಟಿ ನೀಡಿ. ಅದರಲ್ಲಿ ಇನ್‌ಸ್ಟೆಂಟ್ ಪ್ಯಾನ್ ವಿಭಾಗಕ್ಕೆ ಹೋಗಿರಿ.
ಇಲ್ಲಿ ಕೇಳುವ ವಿವರಗಳನ್ನು ಟೈಪ್ ಮಾಡಿರಿ. ಅಗತ್ಯ ಚೆಕ್ ಬಾಕ್ಸ್‌ಗಳನ್ನು ಟಿಕ್ ಮಾಡಿದರೆ, ಕೂಡಲೇ ಇ-ಪ್ಯಾನ್ ಸಂಖ್ಯೆ ಉತ್ಪತ್ತಿಯಾಗುತ್ತದೆ. ಇದನ್ನು ಪಿಡಿಎಫ್ ಮಾದರಿಯಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಅಗತ್ಯ ಇರುವ ಕಡೆಗಳಲ್ಲಿ ಒಂದು ಪ್ರಿಂಟ್ ತೆಗೆದು ಬಳಸಿಕೊಳ್ಳಬಹುದಾಗಿದೆ.
ಪ್ಯಾನ್ ಅಥವಾ ಆಧಾರ್‌ಗೆ ಜೋಡಣೆ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಿರಿ. ‘ಒಟಿಪಿ ‘ ಇದೇ ಸಂಖ್ಯೆಗೆ ಬರುವುದರಿಂದ ಪ್ರತಿ ಬಾರಿಯೂ ಮೊಬೈಲ್ ಬಳಸುವುದು ಅಗತ್ಯವಾಗಿದೆ.