ಅಡುಗೆ ಮನೆಯಲ್ಲಿ ಮಿಕ್ಸಿ ಬಹಳ ಮುಖ್ಯವಾದ ವಸ್ತುವಾಗಿದೆ. ಇದನ್ನು ಮಸಾಲೆ, ಬೇಳೇಕಾಳಗಳು ಹಾಗೂ ಇನ್ನಿತರ ವಸ್ತುಗಳನ್ನು ರುಬ್ಬಲು ಬಳಸುತ್ತಾರೆ. ಹಾಗಾಗಿ ಇದರ ಮೇಲೆ ಮಸಾಲೆಗಳು ಬಿದ್ದು ಬೇಗನೆ ಗಲೀಜು ಕುಳಿತುಕೊಳ್ಳುತ್ತದೆ. ಇದನ್ನು ಸ್ವಚ್ಚ ಮಾಡಿ ಹೊಸದರಂತೆ ಹೊಳೆಯುವ ಹಾಗೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
ಮಿಕ್ಸಿಯ ಹೊರಭಾಗವನ್ನು ಸ್ವಚ್ಛಗೊಳಿಸಲು ಡಿಟರ್ ಜೆಂಟ್ ಮತ್ತು ವಿನೆಗರ್ ಬಳಸಿ. 1 ಚಮಚ ಡಿಟರ್ ಜೆಂಟ್ ಗೆ 2 ಚಮಚ ವಿನೆಗರ್ ಬೆರೆಸಿ ಹತ್ತಿಯ ಸಹಾಯದಿಂದ ಮಿಕ್ಸಿಯ ಮೇಲೆ ಉಜ್ಜಿ. ಇದರಿಂದ ಮಿಕ್ಸಿಯ ಮೇಲೆ ಕುಳಿತ ಗಲೀಜು, ಕಲೆಗಳು ನಿವಾರಣೆಯಾಗುತ್ತದೆ. ಬಳಿಕ ಬಟ್ಟೆಯಿಂದ ಒರೆಸಿ. ಹಾಗೇ ಟೂತ್ ಪೇಸ್ಟ್ ಅನ್ನು ತೆಗೆದುಕೊಂಡು ಬ್ರಷ್ ನ ಸಹಾಯದಿಂದ ಉಜ್ಜಿದರೆ ಕೂಡ ಮಿಕ್ಸಿ ಹೊಳಪಿನಿಂದ ಕೂಡಿರುತ್ತದೆ.