ಕೊರೋನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಜನರು ತಂತಮ್ಮ ಮನೆಗಳು ಹಾಗೂ ಕಚೇರಿಗಳಲ್ಲಿ ದಿಗ್ಬಂಧಿಗಳಾದ ಕಾರಣ ಫಿಟ್ನೆಸ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.
ಸಾಮಾನ್ಯವಾಗಿ ಬಳಸುವ ಯಂತ್ರಗಳು ಹಾಗೂ ಉಪಕರಣಗಳ ಮೂಲಕ ಜಿಮ್ಗಳು ಹಾಗೂ ಫಿಟ್ನೆಸ್ನ ಇತರೆ ಕೇಂದ್ರಗಳಲ್ಲಿ ವೈರಾಣುಗಳು ಬೇಗನೇ ಹಬ್ಬುವ ಸಾಧ್ಯತೆಗಳಿರುವ ಕಾರಣದಿಂದಾಗಿ, ಹೊರಗೆ ಹೋಗಿ ವ್ಯಾಯಾಮ ಮಾಡುವುದನ್ನು ತಾತ್ಕಾಲಿಕವಾಗಿಯಾದರೂ ಬಂದ್ ಮಾಡಲಾಗಿತ್ತು.
ಇಲ್ಲಿದೆ ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮವಿತ್ತ ಮಾಲಿಯನ್ ಮಹಿಳೆಯ ಕಥೆ
ಇದರಿಂದಾಗಿ ಕೆಲ ಮಂದಿ ಮನೆಗಳಲ್ಲೇ ವ್ಯಾಯಾಮ ಮಾಡಿದರೆ ಇನ್ನು ಕೆಲ ಮಂದಿ ತಮ್ಮ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಂಡು, ತಿಂಗಳುಗಟ್ಟಲೇ ಲಾಕ್ ಆಗಿರಬೇಕಾದ ಕಾರಣದಿಂದಾಗಿ ಅವರು ಸಹ ಮನೆಗಳಲ್ಲೇ ವ್ಯಾಯಾಮ ಮಾಡಲು ಆರಂಭಿಸಿದರು.
ಲಾಕ್ಡೌನ್ ವೇಳೆ ಫಿಟ್ನೆಸ್ ಅಪ್ಲಿಕೇಶನ್ಗಳಿಗೆ ಎಂದಿಗಿಂತ ಹೆಚ್ಚಿನ ಟ್ರಾಫಿಕ್ ಕಂಡುಬಂದಿದ್ದಲ್ಲದೇ ವ್ಯಾಯಾಮದ ಚಾನೆಲ್ಗಳಿಗೆ ಯೂಟ್ಯೂಬ್ನಲ್ಲಿ ಒಮ್ಮೆಲೇ ವೀಕ್ಷಕರ ಸಂಖ್ಯೆಯಲ್ಲಿ ನಾಟಕೀಯ ಏರಿಕೆ ಕಂಡು ಬಂದಿದೆ. ಸಾಂಕ್ರಮಿಕದ ಎರಡನೇ ಅಲೆ ಬಂದು ಹೋದ ಮೇಲೂ ಸಹ ಮನೆಯಿಂದಲೇ ಕೆಲಸ ಮಾಡುವುದು ಹಾಗೂ ವ್ಯಾಯಾಮ ಮಾಡುವುದು ಇನ್ನಷ್ಟು ದಿನಗಳ ಕಾಲ ಉಳಿಯುವ ಸಾಧ್ಯತೆ ಇದೆ.