ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಮಣ್ಣಿನ ಮಡಿಕೆ ಬಳಸುತ್ತಿದ್ದರು. ಮಣ್ಣಿನ ಮಡಿಕೆಯಲ್ಲಿ ಹಾಕಿದ ನೀರನ್ನು ಸೇವಿಸುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಮಡಿಕೆ ಅಪರೂಪವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನ ಮಡಿಕೆ ಮನೆಯಲ್ಲಿರಬೇಕು.
ಮಣ್ಣಿನ ಮಡಿಕೆ ಮನೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮನೆಯಲ್ಲಿ ಮಣ್ಣಿನ ಮಡಿಕೆಯಿದ್ರೆ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ.
ಮಣ್ಣಿನ ಮಡಿಕೆ ಸಿಕ್ಕಿಲ್ಲವೆಂದ್ರೆ ಹೂಜಿ ಬಳಸಬಹುದು. ಆದ್ರೆ ಇದ್ರಲ್ಲಿ ಸದಾ ನೀರು ತುಂಬಿರುವಂತೆ ನೋಡಿಕೊಳ್ಳಬೇಕು.
ಮಣ್ಣಿನ ಮಡಿಕೆಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಇದು ನೀರಿನ ದೇವರ ದಿಕ್ಕು ಎನ್ನಲಾಗುತ್ತದೆ.
ಮನೆಯಲ್ಲಿ ಮಾನಸಿಕ ಸಮಸ್ಯೆ, ಒತ್ತಡದಿಂದ ಬಳಲುವವರಿದ್ದರೆ ಅವರಿಗೆ ಮಣ್ಣಿನ ಮಡಿಕೆಯಲ್ಲಿ ಯಾವುದೇ ಗಿಡಕ್ಕೆ ನೀರು ಹಾಕಲು ಸಲಹೆ ನೀಡಿ. ಇದು ಸಮಸ್ಯೆ ಕಡಿಮೆ ಮಾಡುತ್ತದೆ.
ಮಣ್ಣಿನಿಂದ ಮಾಡಿದ ದೇವರ ಮೂರ್ತಿ ಮನೆಯಲ್ಲಿದ್ದರೆ ಇದು ಶುಭಕರ. ಆರ್ಥಿಕ ಸಂಕಷ್ಟದ ಜೊತೆ ಎಲ್ಲ ಸಮಸ್ಯೆ ದೂರವಾಗುತ್ತದೆ.