ನೇಲ್ ಪಾಲಿಶ್ ಹಚ್ಚುವುದಕ್ಕಿಂತ ಅದನ್ನು ತೆಗೆಯಲು ಹೆಚ್ಚು ಪರಿಶ್ರಮಪಡಬೇಕು. ಗಾಢವಾದ ಬಣ್ಣದ ನೇಲ್ ಪಾಲಿಶ್ ಉಗುರಿನ ಆಸುಪಾಸು ಅಂಟಿರುತ್ತದೆ. ಯಾವುದೇ ಗುರುತಿಲ್ಲದೆ ನೇಲ್ ಪಾಲಿಶ್ ತೆಗೆಯುವುದು ಒಂದು ಕಲೆ. ಅದಕ್ಕೆ ಈ ಕೆಳಗಿನ ಟಿಪ್ಸ್ ಅನುಸರಿಸಿ.
ಬಿಸಿ ನೀರು ನೇಲ್ ಪಾಲಿಶ್ ತೆಗೆಯಲು ಸಹಕಾರಿ. ಬಿಸಿ ನೀರಿನಲ್ಲಿ ಉಗುರನ್ನು 10 ನಿಮಿಷ ನೆನೆಸಿಡಿ. ನಂತ್ರ ಹತ್ತಿಯಲ್ಲಿ ಉಗುರನ್ನು ಉಜ್ಜಿದ್ರೆ ಹಳೆ ನೇಲ್ ಪಾಲಿಶ್ ಹೋಗುತ್ತದೆ.
ನೇಲ್ ಪಾಲಿಶ್ ಹಚ್ಚುವ ಮೊದಲು ಒಂದು ಹನಿ ನೇಲ್ ಪಾಲಿಶ್ ಉಗುರಿನ ಮೇಲೆ ಹಾಕಿ ತಕ್ಷಣ ಬಟ್ಟೆಯಿಂದ ಉಜ್ಜಿ. ಆಗ ಉಗುರು ಸ್ವಚ್ಛವಾಗುತ್ತದೆ. ಹೊಸ ನೇಲ್ ಪಾಲಿಶ್ ಹಚ್ಚಬಹುದು.
ಉಗುರಿಗೆ ಅಂಟಿಕೊಂಡಿರುವ ನೇಲ್ ಪಾಲಿಶ್ ಸಂಪೂರ್ಣವಾಗಿ ಹೋಗಿಲ್ಲವೆಂದಾದ್ರೆ ಉಗುರಿಗೆ ಟೂತ್ಪೇಸ್ಟ್ ಹಚ್ಚಿ ನಿಧಾನವಾಗಿ ಉಜ್ಜಿ.
ವಿನೆಗರ್ ಹಚ್ಚಿ ಕೂಡ ನೇಲ್ ಪಾಲಿಶ್ ತಗೆಯಬಹುದು. ಹತ್ತಿಯಿಂದ ವಿನೆಗರ್ ಅದ್ದಿ ನಿಧಾನವಾಗಿ ಉಜ್ಜಿ. ಬಣ್ಣ ಸಂಪೂರ್ಣವಾಗಿ ಹೋಗುತ್ತದೆ.