ಬಿಳಿ ಕೂದಲಿನ ಸಮಸ್ಯೆ ಹೊಂದಿರುವವರು ಕೂದಲಿಗೆ ಕಪ್ಪು ಬಣ್ಣ ಹಚ್ಚುತ್ತಾರೆ. ಕೂದಲಿಗೆ ಕಲರ್ ಹಚ್ಚುವಾಗ ಅದರ ಕಲೆ ಕೆಲವೊಮ್ಮೆ ಬಟ್ಟೆಗಳ ಮೇಲೆ ಬೀಳುತ್ತದೆ. ಇದನ್ನು ಸೋಪ್ ಬಳಸಿ ವಾಶ್ ಮಾಡಿದರೆ ಹೋಗುವುದಿಲ್ಲ. ಹಾಗಾಗಿ ಈ ಕಲೆಗಳನ್ನು ತೆಗೆಯಲು ಸುಲಭ ಉಪಾಯ ಇಲ್ಲಿದೆ.
* ಆಲ್ಕೋಹಾಲ್ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು. ಆಲ್ಕೋಹಾಲ್ ನ್ನು ಕಲೆಗಳ ಮೇಲೆ ಚೆನ್ನಾಗಿ ಉಜ್ಜಿ. ಬಳಿಕ ಸ್ವಲ್ಪ ಸಮಯದವರೆಗೆ ಬಿಟ್ಟು ಬಳಿಕ ಶುದ್ಧ ನೀರಿನಲ್ಲಿ ವಾಶ್ ಮಾಡಿ. ಇದರಿಂದ ಕಲೆಗಳು ಸುಲಭವಾಗಿ ಹೋಗುತ್ತದೆ.
* ವಿನೆಗರ್, ಬಟ್ಟೆಗೆ ತಗುಲಿದ ಕೂದಲಿನ ಕಲರ್ ಕಲೆಗಳನ್ನು ತೆಗೆಯಲು ಸಹಕಾರಿಯಾಗಿದೆ. 2 ಚಮಚ ವಿನೆಗರ್ ಅನ್ನು ಬಿಸಿ ನೀರಿನಲ್ಲಿ ಸೇರಿಸಿ ಸ್ವಲ್ಪ ಸಮಯದವರೆಗೆ ನೆನೆಸಿಡಿ. ಸ್ವಲ್ಪ ಸಮಯದ ಬಳಿಕ ಅದನ್ನು ಉಜ್ಜಿ ಸ್ವಚ್ಛಗೊಳಿಸಿದರೆ ಕಲೆ ಮಾಯವಾಗುತ್ತದೆ.