
ಕೆಲವರು ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬ್ಲೀಚ್ ಬಳಸುತ್ತಾರೆ. ಆದರೆ ಇದರಿಂದ ಬಟ್ಟೆ ಸ್ವಚ್ಛವಾಗುತ್ತದೆ ನಿಜ. ಆದರೆ ಬ್ಲೀಚ್ ನ ಕಲೆ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತದೆ. ಇದರಿಂದ ಬಟ್ಟೆ ಹಾಳಾಗುತ್ತದೆ. ಹಾಗಾಗಿ ಈ ಬ್ಲೀಚ್ ಕಲೆಗಳನ್ನು ತೆಗೆದುಹಾಕಲು ಈ ಸುಲಭ ಮಾರ್ಗವನ್ನು ಅನುಸರಿಸಿ.
ಬಟ್ಟೆಯಲ್ಲಿರುವ ಬ್ಲೀಚ್ ಕಲೆಗಳನ್ನು ನಿವಾರಿಸಲು ಉತ್ತಮ ಮನೆಮದ್ದು ಆಲ್ಕೋಹಾಲ್. ಇದನ್ನು ಬಳಸುವುದರಿಂದ ಬ್ಲೀಚ್ ಕಲೆಗಳನ್ನು ನಿವಾರಿಸಬಹುದು. ಹಾಗಾಗಿ ಪಾತ್ರೆಯಲ್ಲಿ 2-3 ಚಮಚ ಆಲ್ಕೋಹಾಲ್ ಹಾಕಿ. ಅದನ್ನು ಹತ್ತಿ ಸಹಾಯದಿಂದ ಕಲೆ ಇರುವ ಕಡೆ ಉಜ್ಜಿ. ಇದನ್ನು 2 ಬಾರಿ ಮಾಡಿದರೆ ಬ್ಲೀಚ್ ಕಲೆ ಮಾಯವಾಗುತ್ತದೆ.