ಸದಾ ಯಂಗ್ ಆಗಿರಬೇಕು ಅನ್ನೋದು ಎಲ್ಲರ ಆಸೆ. ವಯಸ್ಸಾಗಿ ಮುದುಕ ಮುದುಕಿಯರಾಗಲು ಯಾರೂ ಬಯಸುವುದಿಲ್ಲ. ಆದರೆ ಈ ವಯಸ್ಸಾಗುವ ಪ್ರಕ್ರಿಯೆ ಅತ್ಯಂತ ಸಹಜ. ಇದನ್ನು ಸಂಪೂರ್ಣ ನಿಲ್ಲಿಸುವುದು ಅಸಾಧ್ಯ. ಆದರೆ ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದು. ಇದಕ್ಕೆ ವಿಜ್ಞಾನಿಗಳು ಕೆಲವು ಕ್ರಮಗಳನ್ನು ಕಂಡುಹಿಡಿದಿದ್ದಾರೆ.
ಇದು ಯಾವುದೋ ದುಬಾರಿ ಚಿಕಿತ್ಸೆಯಲ್ಲ. ಬದಲಾಗಿ ಮಾರುಕಟ್ಟೆಯಿಂದ ಸುಲಭವಾಗಿ ಖರೀದಿಸಬಹುದಾದ ಕೆಲವು ಸೂಪರ್‌ಫುಡ್‌ಗಳು. ಈ ಆಹಾರಗಳು ನಮ್ಮನ್ನು ಬಾಹ್ಯವಾಗಿ ಮಾತ್ರವಲ್ಲದೆ ಆಂತರಿಕವಾಗಿಯೂ ಸದೃಢವಾಗಿಡುತ್ತವೆ. ಇವುಗಳ ಸೇವನೆಯಿಂದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದು.
ಬ್ರೊಕೊಲಿ
ಬ್ರೊಕೊಲಿಯಲ್ಲಿ ಕಂಡುಬರುವ ನೈಟ್ರೇಟ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ದೇಹದಲ್ಲಿ ಎಂಟಿ ಏಜಿಂಗ್‌ನಂತೆ ಕೆಲಸ ಮಾಡುತ್ತದೆ. ನೈಟ್ರೇಟ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದಾಗ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ, ಇದು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಷ್ಟೇ ಅಲ್ಲ ಬ್ರೊಕೊಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಬ್ರೊಕೊಲಿ ಮಾತ್ರವಲ್ಲದೆ ಎಲೆಕೋಸು, ಪಾಲಕ್, ಕ್ಯಾರೆಟ್, ಹೂಕೋಸುಗಳನ್ನು ಸಹ ಸೇವಿಸಬಹುದು.
ಅವಕಾಡೊ
ಅವಕಾಡೋದಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಗ್ಲುಟಾಥಿಯೋನ್ ಇದೆ. ಅದು ನಮ್ಮ ದೇಹವನ್ನು ಒತ್ತಡದಿಂದ ರಕ್ಷಿಸುತ್ತದೆ, ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೇಹವು ಗ್ಲುಟಾಥಿಯೋನ್ ಅನ್ನು ತಾನೇ ಉತ್ಪಾದಿಸುತ್ತದೆ, ಆದರೆ ವಯಸ್ಸಾದಂತೆ ರಕ್ತದಲ್ಲಿನ ಗ್ಲುಟಾಥಿಯೋನ್ ಮಟ್ಟವು ಕಡಿಮೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಅವಕಾಡೊ ಸೇವಿಸುವುದು ತುಂಬಾ ಪ್ರಯೋಜನಕಾರಿ.
ಬೀಟ್ರೂಟ್
ಬೀಟ್ರೂಟ್‌ನ ಗಾಢ ಬಣ್ಣಕ್ಕೆ ಕಾರಣವಾದ ಕೆರೊಟಿನಾಯ್ಡ್ ರಾಸಾಯನಿಕವು ಎಂಟಿ ಏಜಿಂಗ್ ಮತ್ತು ಕ್ಯಾನ್ಸರ್ ತಡೆಗಟ್ಟುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ನಮ್ಮ ಆಯಸ್ಸನ್ನು ಕೂಡ ಹೆಚ್ಚಿಸಬಲ್ಲದು.
ಗೆಣಸು
ಗೆಣಸಿನ ಬಣ್ಣವು ಬೀಟಾ-ಕ್ಯಾರೋಟಿನ್ ಎಂಬ ಉತ್ಕರ್ಷಣ ನಿರೋಧಕದಿಂದ ಬರುತ್ತದೆ. ಇದು ದೇಹದಲ್ಲಿ ವಿಟಮಿನ್ ಎ ಅನ್ನು ಉತ್ಪಾದಿಸುತ್ತದೆ. ಚರ್ಮದಲ್ಲಿ ಬಿಗಿತವನ್ನು ಕಾಪಾಡುತ್ತದೆ. ವಿಟಮಿನ್ ಸಿ ಮತ್ತು ಇ ಕೂಡ ಗೆಣಸಿನಲ್ಲಿದೆ. ಇವೆಲ್ಲವೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.