ಕಿಬ್ಬೊಟ್ಟೆಯ ಬೊಜ್ಜು ಅತ್ಯಂತ ಅಪಾಯಕಾರಿ ಕೊಬ್ಬಿನ ರೂಪಗಳಲ್ಲೊಂದು. ಕೆಲವೊಮ್ಮೆ ಬರಿಗಣ್ಣಿನಿಂದ ಗೋಚರವಾಗದ ಈ ಕೊಬ್ಬಿನಿಂದ ಚಯಾಪಚಯ ಅಸ್ವಸ್ಥತೆ, ಹೃದ್ರೋಗ, ಮಧುಮೇಹ ಹೀಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ.
ತೆಳ್ಳಗಿರುವವರಲ್ಲೂ ಈ ಒಳಾಂಗಗಳ ಕೊಬ್ಬು ಅಪಾಯಕಾರಿ. ಇದಕ್ಕೆ ಅತ್ಯುತ್ತಮ ಔಷಧವೆಂದರೆ ಆಹಾರದ ಬದಲಾವಣೆ. ಸರಿಯಾದ ಆಹಾರವನ್ನು ಸಮಯಕ್ಕೆ ಸರಿಯಾಗಿ ತಿನ್ನುವುದು ಮತ್ತು ವ್ಯಾಯಾಮ ಮಾಡುವುದರಿಂದ ಒಳಾಂಗಗಳ ಕೊಬ್ಬನ್ನು ಕರಗಿಸಬಹುದು.
ಹೆಚ್ಚಿನ ಫೈಬರ್, ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ ಉಳ್ಳ ಆಹಾರಗಳನ್ನು ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಕೆಲವೊಂದು ನಿರ್ದಿಷ್ಟ ತರಕಾರಿಗಳನ್ನು ಸೇವಿಸಿದರೆ ಈ ಕೊಬ್ಬನ್ನು ಸಮರ್ಥವಾಗಿ ಕರಗಿಸಬಹುದು. ಕ್ಯಾಲ್ಸಿಯಂ, ಕೊಬ್ಬು ಶೇಖರಣಾ ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಭರಿತ ಆಹಾರವನ್ನು ನಿಯಮಿತವಾಗಿ ಸೇವಿಸುವವರಲ್ಲಿ ಕೊಬ್ಬಿನ ಶೇಖರಣೆ ಕ್ಷೀಣಿಸುತ್ತದೆ.
ಪ್ರತಿದಿನ ಸೇವಿಸುವ 100 ಮಿಲಿಗ್ರಾಂ ಪೋಷಕಾಂಶ ಹೊಟ್ಟೆಯೊಳಗಿನ ಕೊಬ್ಬನ್ನು ಒಂದು ಇಂಚಿನಷ್ಟು ಕಡಿಮೆ ಮಾಡುತ್ತದೆ. ಡೈರಿ ಉತ್ಪನ್ನಗಳು, ಹಸಿರು ಎಲೆಗಳ ತರಕಾರಿಗಳಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಇರುತ್ತದೆ. ಫೈಬರ್, ವಿಟಮಿನ್ ಡಿ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪಾಲಕ್ ಸೊಪ್ಪನ್ನು ಪ್ರತಿದಿನ ಒಂದು ಕಪ್ ನಷ್ಟು ಸೇವನೆ ಮಾಡಬೇಕು.
ನಿಮ್ಮನ್ನು ಪ್ರತಿನಿತ್ಯ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು. ಇದರಿಂದ ಹಲ್ಲು ಮತ್ತು ಮೂಳೆಗಳು ಶಕ್ತಿಯುತವಾಗುತ್ತವೆ. ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವವರಿಗೆ ಊಟದ ನಂತರವೂ ಹೊಟ್ಟೆ ತುಂಬಿದ ಅನುಭವವಾಗುವುದಿಲ್ಲ. ಇದರಿಂದ ಅತಿಯಾಗಿ ಆಹಾರ ಸೇವಿಸುವ ಸಂದರ್ಭ ಬರುತ್ತದೆ.
ಅತಿಯಾದ ತೂಕ ಹೊಂದಿರುವವರಲ್ಲಿ ವಿಟಮಿನ್ ಡಿ ಕೊರತೆ ಇರುತ್ತದೆ. ಹಾಗಾಗಿ ಕ್ಯಾಬೇಜ್, ಕೇಲ್ (ಕೋಸುಗಡ್ಡೆ ಜಾತಿಯ ಸಸ್ಯ), ಅಣಬೆ, ಪಾಲಕ್ ಸೊಪ್ಪು, ಸ್ವಿಸ್ ಚಾರ್ಡ್, ಬಾಯ್ ಚಾಯ್, ರೊಮೈನ್ ಲೆಟಸ್ ಅನ್ನು ಹೆಚ್ಚಾಗಿ ಸೇವಿಸಿದರೆ ಈ ಆಂತರಿಕ ಕೊಬ್ಬನ್ನು ಕರಗಿಸಬಹುದು.