
ಸಾಮಾನ್ಯವಾಗಿ ಮಹಿಳೆಯರಿಗೆಲ್ಲ ಬೇಡದ ಕೂದಲುಗಳೇ ದೊಡ್ಡ ತಲೆನೋವು. ಅದರಲ್ಲೂ ಮುಖದ ಮೇಲೆ ಕೂದಲಿದ್ದರೆ ಸ್ತ್ರೀಯರು ತುಂಬಾನೇ ಮುಜುಗರಪಟ್ಟುಕೊಳ್ತಾರೆ. ಅದನ್ನು ಹೋಗಲಾಡಿಸೋದು ಹೇಗೆ ಅನ್ನೋದು ಎಲ್ಲರನ್ನೂ ಕಾಡುವ ಪ್ರಶ್ನೆ.
ಎಲ್ರೂ ಕೂದಲಿನ ನಿವಾರಣೆಗಾಗಿ ಫೇಶಿಯಲ್, ವ್ಯಾಕ್ಸಿಂಗ್ ಅಂತಾ ಬ್ಯೂಟಿ ಪಾರ್ಲರ್ ಗೆ ಅಲೆಯೋದು ಸಾಮಾನ್ಯ. ಆದ್ರೆ ಇನ್ಮೇಲೆ ಅದಕ್ಕಾಗಿ ನೀವು ಚಿಂತಿಸಬೇಕಿಲ್ಲ. ಮುಖದ ಮೇಲಿರುವ ಬೇಡದ ಕೂದಲುಗಳನ್ನು ಶಾಶ್ವತವಾಗಿ ಸರಳ ವಿಧಾನದ ಮೂಲಕ ಕಿತ್ತು ಹಾಕಬಹುದು. ಅದಕ್ಕಾಗಿಯೇ ಸಣ್ಣದೊಂದು ಟ್ರಿಕ್ಸ್ ಇದೆ.
ಒಂದು ಟೇಬಲ್ ಚಮಚ ಓಟ್ ಮೀಲ್ ಪೇಸ್ಟ್, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆರಸ ತೆಗೆದುಕೊಳ್ಳಿ. ಇವನ್ನೆಲ್ಲ ಚೆನ್ನಾಗಿ ಮಿಶ್ರಮಾಡಿ ಪೇಸ್ಟ್ ತಯಾರಿಸಿ. ಮುಖದಲ್ಲಿ ಎಲ್ಲೆಲ್ಲಿ ನಿಮಗೆ ಬೇಡದ ಕೂದಲನ್ನು ತೆಗೆದು ಹಾಕಬೇಕೋ ಅಲ್ಲೆಲ್ಲಾ ಈ ಪೇಸ್ಟ್ ಹಚ್ಚಿ. 15 ನಿಮಿಷಗಳವರೆಗೆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡಿರಿ. 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
ಈ ರೀತಿ ವಾರಕ್ಕೆ 2-3 ಬಾರಿ ಮಾಡಿ. ಒಂದು ತಿಂಗಳಲ್ಲೇ ಬದಲಾವಣೆಯನ್ನು ಗಮನಿಸಬಹುದು. ಬೇಡದ ಕೂದಲುಗಳು ಮುಖದ ಮೇಲಿಂದ ಸಂಪೂರ್ಣ ಮಾಯವಾಗಿರುತ್ತವೆ.