ಮನೆ ಸುಂದರವಾಗಿದ್ದರೆ ಸಾಲದು ಬಾತ್ ರೂಮ್ ಕೂಡ ಸ್ವಚ್ಛವಾಗಿರಬೇಕು. ಕೆಲವರ ಮನೆ ಸುಂದರವಾಗಿ, ಶುಚಿಯಾಗಿರುತ್ತದೆ. ಆದ್ರೆ ಬಾತ್ ರೂಮ್ ನಿಂದ ವಾಸನೆ ಬರುತ್ತಿರುತ್ತದೆ. ಉತ್ತಮ ವಾತಾವರಣ, ಶುಚಿಗೊಳಿಸುವಿಕೆ ನಂತ್ರವೂ ವಾಸನೆ ಬರ್ತಿರುತ್ತದೆ. ಮನೆಗೆ ಸಂಬಂಧಿಕರು ಬಂದಾಗ ಹೆಚ್ಚು ಮುಜುಗರಕ್ಕೊಳಗಾಗಬೇಕಾಗುತ್ತದೆ. ಕೆಲ ಟಿಪ್ಸ್ ಬಳಸಿ ಬಾತ್ ರೂಮ್ ವಾಸನೆಯನ್ನು ತಡೆಯಬಹುದು.
ಮೊದಲು ಒಂದು ಬೌಲ್ ನಲ್ಲಿ ಅಡುಗೆ ಸೋಡಾ ತೆಗೆದುಕೊಳ್ಳಿ. ಅದಕ್ಕೆ ಒಂದು ಬಕೆಟ್ ನೀರು ಸೇರಿಸಿ. ಸುಹಾಸನೆ ಬರುವ ಯಾವುದಾದ್ರೂ ಎಣ್ಣೆಯ ಹನಿಯನ್ನು ಇದಕ್ಕೆ ಸ್ವಲ್ಪ ಹಾಕಬಹುದು. ನಂತ್ರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಬಾತ್ ರೂಮಿನ ನೆಲಕ್ಕೆ ಹಾಕಿ ಒಂದು ಗಂಟೆ ಹಾಗೆ ಬಿಡಿ. ನಂತ್ರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ.ವಾರಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ಬಾತ್ ರೂಮ್ ನಿಂದ ಬರುವ ವಾಸನೆ ಕಡಿಮೆಯಾಗುತ್ತದೆ.
ಒಂದು ಲೋಟ ಬಿಳಿ ವಿನೆಗರನ್ನು ಒಂದು ಬಕೆಟ್ ನೀರಿಗೆ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಬಾತ್ ರೂಮಿಗೆ ಹಾಕಿ ಒಂದು ಗಂಟೆ ಬಿಟ್ಟು ಸ್ವಚ್ಛಗೊಳಿಸಿದ್ರೂ ಬಾತ್ ರೂಮಿನ ವಾಸನೆ ಕಡಿಮೆಯಾಗುತ್ತದೆ.
ನಾಲ್ಕರಿಂದ ಐದು ನಿಂಬೆ ಹಣ್ಣಿನ ರಸವನ್ನು ನೀರಿಗೆ ಬೆರೆಸಿ ಬಾತ್ ರೂಮಿಗೆ ಹಾಕಬೇಕು. ಇದು ಕೂಡ ಬಾತ್ ರೂಮಿನ ವಾಸನೆಯನ್ನು ತಡೆಯುತ್ತದೆ. ನಿಂಬೆ ಹಣ್ಣಿನ ರಸ ಬೆರೆಸಿದ ನೀರನ್ನು ಹಾಕಿದ ನಂತ್ರ ಮತ್ತೆ ಸ್ವಚ್ಛ ನೀರಿನಲ್ಲಿ ಬಾತ್ ರೂಮ್ ಕ್ಲೀನ್ ಮಾಡುವ ಅವಶ್ಯಕತೆಯಿಲ್ಲ.