
ಮುಖದ ಮೇಲೆ ಮಾತ್ರವಲ್ಲ ಎದೆ ಮತ್ತು ಬೆನ್ನಿನ ಮೇಲೂ ಮೊಡವೆಗಳು ಮೂಡುತ್ತಿವೆಯೇ….? ಇದು ನಿಜವಾಗಿಯೂ ಚಿಂತಿಸಬೇಕಾದ ಸಂಗತಿಯೇ.
ಇವು ಮೊಡವೆಗಳನ್ನು ಹೋಲುತ್ತವೆ ಅಷ್ಟೇ. ನಿಜವಾಗಿಯೂ ಅದು ಮೊಡವೆಗಳಲ್ಲ ಕೀವು ಗುಳ್ಳೆಗಳು. ರಸದೂತಗಳ ಕಾರಣದಿಂದ ಇವು ಎದೆ ಹಾಗೂ ಬೆನ್ನಿನ ಮೇಲೆ ಮೂಡುತ್ತವೆ. ಋತುಚಕ್ರದ ಅವಧಿಯಲ್ಲಿ ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತವೆ.
ಕೆಲವೊಮ್ಮೆ ಇದು ಅನುವಂಶಿಕವೂ ಆಗಿರಬಹುದು. ದೇಹದ ಯಾವುದೇ ಭಾಗದಲ್ಲಿ ಮೊಡವೆಗಳಿದ್ದರೂ ಬಿಸಿಲು ನೇರವಾಗಿ ಬಿದ್ದಾಗ ಅವು ಮತ್ತಷ್ಟು ದೊಡ್ಡದಾಗುತ್ತವೆ. ಇದರೊಂದಿಗೆ ಚರ್ಮವನ್ನೂ ಒಣಗಿಸುತ್ತವೆ.
ಇದರ ನಿವಾರಣೆಗೆ ಒಮೆಗಾ 3 ಇರುವ ಆಹಾರಗಳನ್ನು ಸೇವಿಸಿ. ಇವು ತೈಲ ಉತ್ಪಾದನೆಯನ್ನು ನಿಯಂತ್ರಿಸಿ ತೇವಾಂಶದ ಮಟ್ಟವನ್ನು ಹೆಚ್ಚಿಸುತ್ತದೆ. ಸತ್ತ ಜೀವಕೋಶಗಳನ್ನು ಕೆರೆದು ತೆಗೆಯಬೇಕು, ಇವು ಸೂಕ್ಷ್ಮ ರಂಧ್ರಗಳನ್ನು ಮುಚ್ಚುವ ಕಾರಣ ಮೊಡವೆಗಳು ಹೆಚ್ಚು ಏಳುತ್ತವೆ.
ಟೀ ಟ್ರೀ ಎಣ್ಣೆಯನ್ನು ಹತ್ತಿಯ ಬಟ್ಟೆಯಲ್ಲಿ ಅದ್ದಿ ಮೃದುವಾಗಿ ಈ ಜಾಗಕ್ಕೆ ಹಚ್ಚಿಕೊಳ್ಳಿ. ಗಾಳಿಯಾಡುವ ಹತ್ತಿಯ ಬಟ್ಟೆಯನ್ನೇ ಧರಿಸಿ. ಮೊಡವೆ ಗುಣವಾಗುವ ತನಕ ಇತರ ಕ್ರೀಮ್ ಗಳನ್ನು ಬಳಸದಿರಿ.