alex Certify ಇಲ್ಲಿದೆ ಹರೆಯದಲ್ಲಿ ಕಾಡುವ ಮೊಡವೆ ಕಾಟಕ್ಕೆ ʼಪರಿಹಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಹರೆಯದಲ್ಲಿ ಕಾಡುವ ಮೊಡವೆ ಕಾಟಕ್ಕೆ ʼಪರಿಹಾರʼ

ಹರೆಯ ಬಂದಾಗ ಮೊಡವೆ ಬರುವುದು ಸಹಜ. ಇದರಿಂದ ಆಗುವ ಮಾನಸಿಕ ಕಿರಿಕಿರಿ ಕಡಿಮೆಯೇನಲ್ಲ.

ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಮೊಡವೆ ಕಂಡರೆ ಮನಸ್ಸಿಗೆ ಏನೋ ಒಂಥರ, ಅದನ್ನು ಹೇಳಲಾಗದು.

ಹೆಚ್ಚಿನ ಜನರಲ್ಲಿ ಮೊಡವೆ ಕಾಟ ಬಹಳವಾಗಿ ಕಾಡಿರುತ್ತವೆ. ಹರೆಯದವರಂತೂ ಮೊಡವೆ ಯಾಕಾದರೂ ಬಂತಪ್ಪ ಎಂದು ನಿಟ್ಟುಸಿರು ಬಿಡುತ್ತಾರೆ. ವಯಸ್ಕರಲ್ಲಿಯೂ ಮೊಡವೆ ಬರುವುದರಿಂದ ಕಿರಿಕಿರಿ ಅನುಭವಿಸುತ್ತಾ ಹಿಡಿಶಾಪ ಹಾಕುವವರೇ ಹೆಚ್ಚು.

ಮೊಡವೆ ಬರಲು ಮುಖ್ಯ ಕಾರಣ ಟೆಸ್ಪೊಸ್ಟೆರಾನ್ ಎಂಬ ಹಾರ್ಮೋನು ಎನ್ನುತ್ತಾರೆ ತಜ್ಞರು. ವಿಭಿನ್ನವಾದ ತ್ವಚೆ ಬಳಕೆ ಉತ್ಪನ್ನಗಳನ್ನು ಬಳಸುವುದರಿಂದ, ಫೇಷಿಯಲ್ಸ್, ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್, ಕ್ರೀಮ್ ಗಳು, ಜಿಡ್ಡಿನ ಚರ್ಮ, ಯುವತಿಯರಲ್ಲಿ ಋತುಚಕ್ರ ಮೊದಲಾದ ಕಾರಣಗಳಿಂದ ಮೊಡವೆ ಬರುತ್ತವೆ.

ಸೂಕ್ತವಿಲ್ಲದ ತ್ವಚೆ ಉತ್ಪನ್ನಗಳ ಬಳಸಬೇಡಿ. ಮೊಡವೆಯಿಂದ ದೂರವಾಗಲು ಆದಷ್ಟು ಸೂರ್ಯನ ಕಿರಣಗಳಿಂದ ದೂರವಿರಿ. ಜೊತೆಗೆ ಶುಷ್ಕ ತ್ವಚೆ, ಜಿಡ್ಡು ತ್ವಚೆ ಇರುವವರು ನಿಗದಿತ ಬೇಸ್ಡ್ ಉತ್ಪನ್ನಗಳನ್ನು ಬಳಸಬಹುದಾಗಿದೆ. ಜಿಡ್ಡು ಕಂಡು ಬಂದಾಗ ಮುಖ ತೊಳೆಯಿರಿ. ಆದರೆ ಮುಖದಲ್ಲಿ ಮೊಡವೆ ಬಂದಿತೆಂದು ನೀವೇ ವೈದ್ಯರಾಗಿ ಕಂಡ ಕಂಡ ಯಾವುದೇ ಔಷಧಿ ಹಚ್ಚದೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಮೊಡವೆಗಳಿಂದ ದೂರವಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...