
ಸೆಕ್ಸ್ ಮನುಷ್ಯ ಜೀವನದ ಒಂದು ಪ್ರಮುಖ ಭಾಗ. ಇದು ಶಾರೀರಿಕ ಸುಖ ನೀಡುವ ಜೊತೆಗೆ ಸಂಬಂಧ ಗಟ್ಟಿಯಾಗಲು ಕಾರಣವಾಗುತ್ತದೆ. ದಾಂಪತ್ಯದಲ್ಲಿ ಸೆಕ್ಸ್ ಜೀವನ ಮಹತ್ವದ ಪಾತ್ರ ವಹಿಸುತ್ತದೆ.
ಸೆಕ್ಸ್ ನಂತ್ರ ಮಾಡುವ ಕೆಲಸ ಕೂಡ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಆಪ್ಟರ್ ಪ್ಲೇ ಎಂದು ತಜ್ಞರು ಕರೆಯುತ್ತಾರೆ. ಸೆಕ್ಸ್ ನಂತ್ರ ಸಂಗಾತಿಗಳು ಮಾಡುವ ಕೆಲವೊಂದು ತಪ್ಪುಗಳು ಸಂಬಂಧ ಹಾಳು ಮಾಡಿದ್ರೆ ಕೆಲವೊಂದು ಕೆಲಸಗಳು ಸಂಬಂಧ ಗಟ್ಟಿಯಾಗಲು ಕಾರಣವಾಗುತ್ತದೆ.
ಸಂಭೋಗದ ನಂತ್ರ ತಕ್ಷಣ ನಿದ್ರೆ ಮಾಡುವುದು ಸರಿಯಲ್ಲ. ಸೆಕ್ಸ್ ನಂತ್ರ ಸಂಗಾತಿಗಳು ಸ್ವಲ್ಪ ಸಮಯ ಮಾತನಾಡುವುದು ಒಳ್ಳೆಯದು. ಇದು ಇಬ್ಬರ ನಡುವಿರುವ ಅಂತರವನ್ನು ಕಡಿಮೆ ಮಾಡಿ, ಸಂಗಾತಿ ಖುಷಿಯಾಗಿ ಸಂಬಂಧ ಗಟ್ಟಿಯಾಗಲು ಕಾರಣವಾಗುತ್ತದೆ.
ಸೆಕ್ಸ್ ನಂತ್ರ ಬೇರೆಯವರಿಗೆ ಫೋನ್ ಮಾಡಬೇಡಿ. ಇದು ಸಂಗಾತಿ ಮನಸ್ಸನ್ನು ಘಾಸಿಗೊಳಿಸುತ್ತದೆ. ನನ್ನಲ್ಲಿ ಆಸಕ್ತಿಯಿಲ್ಲ ಎಂಬ ನೋವು ಸಂಗಾತಿಯನ್ನು ಕಾಡಬಹುದು.
ಸಂಭೋಗದ ನಂತ್ರ ಸಂಗಾತಿ ಜೊತೆ ಸಮಯ ಕಳೆಯದೆ ಪುಸ್ತಕ ಅಥವಾ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೂ ಸಂಗಾತಿ ಮನಸ್ಸು ಮುರಿಯುತ್ತದೆ.
ಕೆಲವರು ಸೆಕ್ಸ್ ನಂತ್ರ ಮಕ್ಕಳ ಜೊತೆ ಆಟವಾಡ್ತಾರೆ. ಇದು ಕೂಡ ಒಳ್ಳೆಯದಲ್ಲ. ಸೆಕ್ಸ್ ನಂತ್ರ ಸಂಗಾತಿಗೆ ಮಹತ್ವ ನೀಡಬೇಕು. ಸ್ವಲ್ಪ ಸಮಯ ಮಕ್ಕಳನ್ನು ಬೇರೆ ಕೋಣೆಯಲ್ಲಿಡುವುದು ಉತ್ತಮ.
ಸೆಕ್ಸ್ ನಂತ್ರ ಸಂಗಾತಿಯಿಂದ ದೂರವಾಗಿ ಮಲಗುವುದು ಮಾಡುವ ಅತಿದೊಡ್ಡ ತಪ್ಪು. ನಿದ್ರೆ ಬರಲಿ, ಬರದಿರಲಿ ಸಂಗಾತಿ ಜೊತೆ ಮಲಗುವುದು ಒಳ್ಳೆಯದು.
ಸಂಭೋಗದ ನಂತ್ರ ಕೆಲ ಮಹಿಳೆಯರು ಅಡುಗೆಯಲ್ಲಿ ಬ್ಯುಸಿಯಾಗ್ತಾರೆ. ಇದು ಕೂಡ ಒಳ್ಳೆಯದಲ್ಲ. ಸಂಭೋಗದಲ್ಲಿ ಸಂಗಾತಿಗೆ ಮನಸ್ಸಿಲ್ಲ. ಹಾಗಾಗಿ ಅಡುಗೆ ಮನೆಗೆ ಹೋದ್ಲು ಎಂಬ ಭಾವನೆ ಪುರುಷರನ್ನು ಕಾಡುವ ಸಾಧ್ಯತೆಯಿರುತ್ತದೆ.