![](https://kannadadunia.com/wp-content/uploads/2022/02/5bb3c0d8-a4f8-4c1f-a0fe-cd278be5ae6f.jpg)
ಮೋಟಾರು ವಾಹನ ಚಾಲನೆ ಮಾಡುವ ವೇಳೆ ಸಂಚಾರಿ ನಿಯಮಗಳ ಮೂಲ ಅರಿವು ಇರಬೇಕಾದದ್ದು ನಮ್ಮ ಹಾಗೂ ಇತರೆ ಸಂಚಾರಿಗಳ ಸುರಕ್ಷತೆ ದೃಷ್ಟಿಯಿಂದ ಅತ್ಯಗತ್ಯವಾಗಿದೆ.
ಸಂಚಾರಿಗಳಲ್ಲಿ ಸಂಚಾರಿ ಚಿಹ್ನೆಗಳು ಹಾಗೂ ನಿಯಮಗಳ ಸರಿಯಾದ ಜ್ಞಾನ ಇದ್ದು, ಅವುಗಳನ್ನು ರಸ್ತೆಯ ಮೇಲೆ ಪಾಲನೆ ಮಾಡಿದಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಇನ್ನಷ್ಟು ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ. ನೀವೇನಾದರೂ ಚಾಲನಾ ಕಲಿಕಾ ಪರವಾನಗಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಈ ಚಿಹ್ನೆಗಳ ಬಗ್ಗೆ ಅರಿತುಕೊಂಡಲ್ಲಿ ಲಿಖಿತ ಪರೀಕ್ಷೆಯಲ್ಲಿ ಪಾಸಾಗಲು ಅನುಕೂಲವಾಗಬಹುದು.
BIG NEWS: ಬಜೆಟ್ ಮಂಡನೆಗೆ ರಾಷ್ಟ್ರಪತಿ ಔಪಚಾರಿಕ ಒಪ್ಪಿಗೆ; ಈ ಬಾರಿ ಬಜೆಟ್ ಮೌಲ್ಯ ಎಷ್ಟು ಗೊತ್ತಾ…?
ಸಂಚಾರ ನಿರ್ವಹಣೆಯಲ್ಲಿ ಸಂಚಾರಿ ಪೊಲೀಸರ ಪಾತ್ರ ಬಹಳ ಮಹತ್ವ ಪಡೆದಿದೆ. ಸಂಚಾರಿ ಪೊಲೀಸರ ಕೈಸನ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಜವಾಬ್ದಾರಿಯುತ ಸಂಚಾರಿಗಳಾಗಿ ರಸ್ತೆ ಸುರಕ್ಷತೆಯತ್ತ ನಮ್ಮ ಹೊಣೆಗಾರಿಕೆ ಮೆರೆಯಬಹುದಾಗಿದೆ:
ಒಂದು ಹಸ್ತ ಮುಂದೆ ಇದ್ದಾಗ
ಸಂಚಾರಿ ಪೇದೆ ಹೀಗೆ ಮಾಡಿದಾಗ, ಮುಂಬದಿಯಿಂದ ಬರುತ್ತಿರುವ ಸಂಚಾರವನ್ನು ನಿಲ್ಲುವಂತೆ ಆತ ಸೂಚಿಸುತ್ತಿದ್ದಾನೆ ಎಂದರ್ಥ.
ತೋಳಿನ ಪಕ್ಕಕ್ಕೆ ಒಂದು ಕೈ ತೋರಿದಾಗ
ತೋಳಿನ ಪಕ್ಕಕ್ಕೆ ನೇರವಾಗಿ ತನ್ನ ಕೈಯನ್ನು ಸಂಚಾರಿ ಪೇದೆ ವಿಸ್ತರಿಸಿದಾಗ, ತಮ್ಮ ಹಿಂಬದಿಯಿಂದ ಬರುತ್ತಿರುವ ಸಂಚಾರವನ್ನು ನಿಲ್ಲಿಸಬೇಕೆಂದು ಸೂಚಿಸುತ್ತಿದ್ದಾರೆ ಎಂದರ್ಥ.
ಒಂದು ಕೈಯನ್ನು ಮುಖಕ್ಕೆ ಮುಟ್ಟುವಂತೆ ಬಾಗಿಸಿ, ಮತ್ತೊಂದು ಕೈಯನ್ನು ತೋಳಿನ ಪಕ್ಕಕ್ಕೆ ವಿಸ್ತರಿಸಿದಾಗ
ಸಂಚಾರಿ ಪೇದೆ ಹೀಗೆ ಮಾಡುವುದನ್ನು ನೀವು ನೋಡಿದಲ್ಲಿ, ಬಲಬದಿಯಿಂದ ಬರುತ್ತಿರುವ ವಾಹನಗಳನ್ನು ಮುಂದಕ್ಕೆ ಹೋಗಲು ಆತ ಅನುಮತಿ ನೀಡುತ್ತಿದ್ದಾನೆ ಎಂದರ್ಥ.
ಮುಂಭಾಗದಲ್ಲಿ ಒಂದು ಕೈ ಅಂಗೈಯನ್ನು ಸ್ವಲ್ಪ ಮೇಲ್ಮುಖವಾಗಿ ತೋರಿಸಿ, ಇನ್ನೊಂದು ಕೈ ಎದೆಯ ಕಡೆಗೆ ಬಾಗಿರುತ್ತದೆ
ಈ ಚಿಹ್ನೆಯು ಎಡದಿಂದ ಬರುವ ವಾಹನಗಳಿಗೆ ಹೋಗಲು ಅನುವು ಮಾಡಿಕೊಡುತ್ತದೆ.
ಒಂದು ಅಂಗೈ ಮುಂಭಾಗದಲ್ಲಿ ಮತ್ತು ಇನ್ನೊಂದು ಕೈ ಭುಜದ ಪಕ್ಕದಲ್ಲಿ
ಹಿಂದಿನಿಂದ ಮತ್ತು ಮುಂಭಾಗದಿಂದ ಏಕಕಾಲದಲ್ಲಿ ವಾಹನಗಳು ಬರುತ್ತಿದ್ದರೆ, ಅವುಗಳನ್ನು ನಿಲ್ಲಿಸಲು ಈ ಸನ್ನೆ ಬಳಸಲಾಗುತ್ತದೆ.
’ಊ ಅಂಟಾವಾ…..’ ಹಾಡಿನ ಚಿತ್ರೀಕರಣದ ಹಿಂದಿನ ಮತ್ತೊಂದು ಗುಟ್ಟು ಬಿಚ್ಚಿಟ್ಟ ನೃತ್ಯ ಸಂಯೋಜಕ
ಎರಡೂ ಕೈಗಳನ್ನು 180 ಡಿಗ್ರಿ ಕೋನವನ್ನು ಪ್ರತಿ ಬದಿಯಲ್ಲಿ ಇರಿಸಿದರೆ
ಬಲ ಮತ್ತು ಎಡ ಬದಿಗಳಿಂದ ಏಕಕಾಲದಲ್ಲಿ ಬರುವ ವಾಹನಗಳನ್ನು ನಿಲ್ಲಿಸಲು ಈ ಸನ್ನೆ ಬಳಸಲಾಗುತ್ತದೆ. ಎರಡೂ ಮೊಣಕೈಗಳು ಮೇಲ್ಮುಖವಾಗಿ ಬಾಗಿ ತೆರೆದ ತ್ರಿಕೋನಾಕಾರದಲ್ಲಿರುತ್ತವೆ.
ಎರಡೂ ಮೊಣಕೈಗಳು ತೆರೆ ತ್ರಿಕೋನಾಕೃತಿಯಲ್ಲಿ ಮೇಲ್ಮುಖವಾಗಿ ಬಾಗಿದಾಗ
ತುರ್ತು ಸಂದರ್ಭಗಳಲ್ಲಿ, ಎಲ್ಲಾ ಸಂಚಾರವನ್ನು ಒಮ್ಮೆಗೆ ನಿಲ್ಲಿಸಲು ಈ ಸನ್ನೆ ಬಳಸಲಾಗುತ್ತದೆ.
ಒಂದು ಕೈ ಮುಂದೆ ಮತ್ತು ಇನ್ನೊಂದು ಇನ್ನೊಂದು ಕೈ ಹಿಂಭಾಗಕ್ಕೆ ಚಾಚಿದಾಗ
ಟಿ-ಪಾಯಿಂಟ್ನಲ್ಲಿ ವಾಹನಗಳನ್ನು ಪ್ರಾರಂಭಿಸಲು ಪೊಲೀಸ್ ಸಿಬ್ಬಂದಿ ಮೇಲಿನ ಸನ್ನೆ ಬಳಸುತ್ತಾರೆ.
ಬರೀ ಈ ಕೈ ಸನ್ನೆಗಳ ಮೂಲಕ ಸಂಚಾರ ನಿರ್ವಹಣೆಯ ಅಷ್ಟೂ ಹೊಣೆಗಾರಿಗೆ ನಿರ್ವಹಿಸುವುದು ಕಠಿಣ ಕೆಲಸವಲ್ಲವೇ? ಆದ್ದರಿಂದ, ಮುಂದಿನ ಬಾರಿ ನೀವು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಕಂಡಾಗ, ಸಾಧ್ಯವಾದಲ್ಲಿ ಅವರಿಗೊಂದು ಧನ್ಯವಾದ ಅರ್ಪಿಸಿ.