alex Certify ಇಲ್ಲಿ ಪರಸ್ಪರ ಹೆಸರಿನಿಂದಲ್ಲ, ಶಿಳ್ಳೆ ಹೊಡೆದೇ ಕರೆಯುತ್ತಾರೆ……! ಶಿಳ್ಳೆ ಭಾಷೆಯಲ್ಲಿ ಮಾತನಾಡುವ ಹಳ್ಳಿ ಎಲ್ಲಿದೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಪರಸ್ಪರ ಹೆಸರಿನಿಂದಲ್ಲ, ಶಿಳ್ಳೆ ಹೊಡೆದೇ ಕರೆಯುತ್ತಾರೆ……! ಶಿಳ್ಳೆ ಭಾಷೆಯಲ್ಲಿ ಮಾತನಾಡುವ ಹಳ್ಳಿ ಎಲ್ಲಿದೆ ಗೊತ್ತಾ…..?

ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲೂ ಒಬ್ಬರನ್ನೊಬ್ಬರು ಹೆಸರು ಹಿಡಿದೇ ಕರೆಯುತ್ತಾರೆ. ಅಪರಿಚಿತರಾದರೆ ಗೌರವದಿಂದ ಸರ್‌ ಅಥವಾ ಮ್ಯಾಡಮ್‌ ಎಂದು ಸಂಬೋಧಿಸುತ್ತಾರೆ. ಆದರೆ ಭಾರತದಲ್ಲೊಂದು ವಿಶಿಷ್ಟ ಗ್ರಾಮವಿದೆ. ಇಲ್ಲಿ ಒಬ್ಬರನ್ನೊಬ್ಬರು ಹೆಸರು ಹಿಡಿದು ಕರೆಯುವುದೇ ಇಲ್ಲ. ಬದಲಾಗಿ ಶಿಳ್ಳೆ ಹೊಡೆಯುವ ಮೂಲಕ ಮಾತನಾಡಿಸುತ್ತಾರೆ. ಈ ಹಳ್ಳಿ ವಿಶಿಷ್ಟವಾದ ಶಿಳ್ಳೆ ಭಾಷೆಯನ್ನು ಅಳವಡಿಸಿಕೊಂಡಿದೆ.

ಮೇಘಾಲಯದ ಕಾಂಗ್‌ಥೊಂಗ್‌ ಗ್ರಾಮದ ಜನರು ಶತಮಾನಗಳಿಂದಲೂ ಶಿಳ್ಳೆ ಹೊಡೆಯುತ್ತಾ ಒಬ್ಬರನ್ನೊಬ್ಬರು ಮಾತನಾಡಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನ ಭಿನ್ನವಾಗಿ ಶಿಳ್ಳೆ ಹೊಡೆಯುತ್ತಾರೆ. ಗದ್ದೆಯಲ್ಲಿ ಕೆಲಸ ಮಾಡುವವರು, ಕಾಡಿನಲ್ಲಿ ಮರ ಕಡಿಯುವವರು ಎಲ್ಲರೂ ಇದೇ ರೀತಿ ಶಿಳ್ಳೆ ಹೊಡೆಯುತ್ತಾ ಒಬ್ಬರನ್ನೊಬ್ಬರು ಕರೆಯುತ್ತಾರೆ. ಈ ವಿಶಿಷ್ಟ ಸಂಪ್ರದಾಯದಿಂದಾಗಿ ಕಾಂಗ್‌ಥೊಂಗ್‌ ಗ್ರಾಮ ದೇಶ-ವಿದೇಶಗಳಲ್ಲಿ ಜನಪ್ರಿಯವಾಗಿದೆ. ಇದನ್ನು ‘ವಿಸ್ಲಿಂಗ್ ವಿಲೇಜ್’ ಎಂದೂ ಕರೆಯುತ್ತಾರೆ.

ಶಿಳ್ಳೆ ಭಾಷೆಯ ಇತಿಹಾಸ

ಕಾಂಗ್‌ಥೊಂಗ್‌ ಗ್ರಾಮ ದಟ್ಟವಾದ ಕಾಡುಗಳಿಂದ ಆವೃತವಾಗಿದೆ. ಇಲ್ಲಿನ ಬೆಟ್ಟಗಳು ಎತ್ತರವಾಗಿದ್ದು ಕಣಿವೆಗಳು ಆಳವಾಗಿವೆ. ಹಾಗಾಗಿ ಜೋರಾಗಿ ಕರೆದರೂ ಕೇಳಿಸುವುದಿಲ್ಲ. ಇದೇ ಕಾರಣದಿಂದ ಜನರು ಶಿಳ್ಳೆ ಹೊಡೆದು ಮಾತನಾಡುವ ವಿಧಾನವನ್ನು ಅಳವಡಿಸಿಕೊಂಡರು. ಈ ಸಂಪ್ರದಾಯ ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದು ಇಂದಿಗೂ ಜೀವಂತವಾಗಿದೆ.

ಶಿಳ್ಳೆಯ ಪ್ರಾಮುಖ್ಯತೆ ಮತ್ತು ವೈಜ್ಞಾನಿಕ ಕಾರಣ

ಮೇಘಾಲಯದ ಈ ಹಳ್ಳಿಯ ಭೌಗೋಳಿಕತೆಯು ಸರಳ ಮಾತನಾಡುವ ಭಾಷೆಯು ದೂರದವರೆಗೆ ಧ್ವನಿಯನ್ನು ರವಾನಿಸುವಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಶಿಳ್ಳೆಯ ಬಳಕೆ ಇಲ್ಲಿ ಪ್ರಾಯೋಗಿಕ ಆಯ್ಕೆಯಾಗಿದೆ. ಕಾಡು ಮತ್ತು ಬೆಟ್ಟಗಳ ನಡುವೆ ದೂರದವರೆಗೆ ಶಿಳ್ಳೆಯ ಶಬ್ಧ ಸುಲಭವಾಗಿ ಕೇಳುತ್ತದೆ ಮತ್ತು ಇದು ಸಂವಹನದ ಪರಿಣಾಮಕಾರಿ ಸಾಧನವಾಗಿದೆ. ಕಾಂಥೊಂಗ್‌ ಗ್ರಾಮದ ಈ ವಿಶಿಷ್ಟ ಸಂಪ್ರದಾಯವು ಈಗ ಪ್ರವಾಸಿ ಆಕರ್ಷಣೆಯಾಗಿದೆ. ಈ ಗ್ರಾಮವನ್ನು ನೋಡಲು ದೂರದೂರುಗಳಿಂದ ಜನರು ಬರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...