ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ.
ಕೆಲವರಿಗೆ ಚರ್ಮದ ಅಲರ್ಜಿ ಸಮಸ್ಯೆ ಇರುತ್ತದೆ. ಅಂಥವರು ಕಾಟನ್ ಬಟ್ಟೆಗಳನ್ನೇ ಧರಿಸಲು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ತ್ವಚೆಗೆ ಯಾವುದೇ ಕಿರಿಕಿರಿ ಇರಲ್ಲ. ಮಕ್ಕಳಿಗೂ ಹೆಚ್ಚಾಗಿ ಕಾಟನ್ ಬಟ್ಟೆಗಳನ್ನೇ ಬಳಸುವುದು ಇದೇ ಕಾರಣಕ್ಕೆ. ಮಗುವಿನ ತ್ವಚೆ ಬಹು ಸೂಕ್ಷ್ಮವಾಗಿರುವುದರಿಂದ ಅಲರ್ಜಿ ಮೊದಲಾದ ಸಮಸ್ಯೆಗಳನ್ನು ತಪ್ಪಿಸಲು ಕಾಟನ್ ಬಟ್ಟೆಗಳನ್ನೇ ಬಳಸಲಾಗುತ್ತದೆ.
ಇನ್ನು ಈ ಕಾಟನ್ ಬಟ್ಟೆಗಳು ದೀರ್ಘಕಾಲ ಬಾಳಿಕೆ ಬರುತ್ತದೆ. ವಾಷಿಂಗ್ ಮೆಷಿನ್ ಮೂಲಕ ತೊಳೆದರೆ ಪುಡಿ ಪುಡಿಯಾಗಿ ಗೆರೆಗಳು ಬೀಳುತ್ತವೆಯೇ ಹೊರತು ಹರಿಯುವುದಿಲ್ಲ. ಹಾಗಾಗಿ ಉಳಿದೆಲ್ಲಾ ಪ್ರಕಾರಗಳಿಂದ ಇದನ್ನು ಬಳಸುವುದೇ ಒಳ್ಳೆಯದು.