ಜಂಕ್ ಫುಡ್ ಸೇವನೆ ಹೆಚ್ಚುತ್ತಿದ್ದಂತೆ ಜಂತು ಹುಳು ಸಮಸ್ಯೆಯೂ ಅಧಿಕವಾಗುತ್ತದೆ. ಇದರಿಂದ ಹೊಟ್ಟೆನೋವು, ಹೊಟ್ಟೆ ಹಿಡಿದಂತೆ ಆಗುವ ಸಮಸ್ಯೆಗಳು ಕಾಡುತ್ತವೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಶುದ್ಧ ನೀರಿನ ಸೇವನೆ, ಊಟಕ್ಕೂ ಮುನ್ನ ಕೈ ತೊಳೆಯದಿರುವುದು, ಮಲವಿಸರ್ಜನೆ ಸರಿಯಾಗಿ ಆಗದಿರುವುದು.
ಜಂತುಹುಳು ಸಮಸ್ಯೆ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅವರ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಓಂ ಕಾಳಿನಲ್ಲಿ ಈ ಸಮಸ್ಯೆಗೆ ಮದ್ದಿದೆ. ಅರ್ಧ ಚಮಚ ಓಂ ಕಾಳನ್ನು ಸಣ್ಣ ಬೆಂಕಿಯಲ್ಲಿ ಹುರಿದು ಪಕ್ಕಕ್ಕಿಡಿ. ನಂತರ ಬೆಲ್ಲ ಪಾಕ ಬರಿಸಿ. ಓಂ ಕಾಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತಣ್ಣಗಾದ ಬಳಿಕ ಉಂಡೆಗಳಾಗಿ ಮಾಡಿಕೊಂಡು ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಒಂದೊಂದಾಗಿ ತಿನ್ನಿ.
ಇದರೊಂದಿಗೆ ಊಟಕ್ಕೆ ಮುನ್ನ ಸ್ವಚ್ಛವಾಗಿ ಕೈ ತೊಳೆದುಕೊಳ್ಳಿ. ಶುದ್ಧವಾದ ನೀರು ಆಹಾರವನ್ನು ಸೇವಿಸಿ. ಶೇಖರಿಸಿ ಇಟ್ಟ ಆಹಾರವನ್ನು ತಿನ್ನಬೇಡಿ. ದಾಳಿಂಬೆ, ಕ್ಯಾರೆಟ್ ಅನ್ನು ಹೆಚ್ಚಾಗಿ ಸೇವಿಸಿ.