ನಿತ್ಯ ಸೇವಿಸುವ ಆಹಾರ ಪದ್ದತಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಮೂಲಕ ಮುಖದ ಮೇಲೆ ಮೂಡುವ ಮೊಡವೆಗೆ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆನ್ನುತ್ತೀರಾ….?
ಹೆಚ್ಚು ಸಿಹಿ ಸೇವನೆ ಒಳ್ಳೆಯದಲ್ಲ. ಸಕ್ಕರೆಯಲ್ಲಿ ಗ್ಲೆಸೇಮಿಕ್ ಪ್ರಮಾಣ ಹೆಚ್ಚಾಗಿ ಇರುತ್ತದೆ. ಹಾಗಾಗಿ ಸಕ್ಕರೆ ಮತ್ತು ಕಾರ್ಬೋ ಹೈಡ್ರೇಟ್ ಪ್ರಮಾಣ ಅಧಿಕ ಇರುವ ಯಾವುದೇ ಪದಾರ್ಥವನ್ನು ಹೆಚ್ಚು ಸೇವಿಸಬೇಡಿ.
ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಬೆಣ್ಣೆ, ಹಾಲು, ತುಪ್ಪ ಸೇವನೆಯಿಂದಲೂ ಮುಖದ ಮೇಲೆ ಮೊಡವೆ ಏಳುತ್ತವೆ. ಹಾಗಾಗಿ ಇದರಿಂದಲೂ ದೂರವಿರಿ.
ಕ್ಲೆನ್ಸಿಂಗ್ ಬ್ರಷ್ ನಿಂದ ಪದೇ ಪದೇ ಮುಖ ತೊಳೆಯದಿರಿ. ವಾರಕ್ಕೆ ಎರಡು ಬಾರಿ ಮಾತ್ರ ಮುಖಕ್ಕೆ ಸ್ಕ್ರಬ್ ಮಾಡಿ.
ತಜ್ಞರ ಸಲಹೆ ಮೇರೆಗೆ ಸೌಂದರ್ಯ ಉತ್ಪನ್ನಗಳನ್ನು ಬಳಸುವುದು ಒಳ್ಳೆಯದು. ಪದೇ ಪದೇ ಮುಖದ ಮೇಲೆ ಕೈಯಾಡಿಸದಿರಿ. ಕೂದಲನ್ನು ಮುಟ್ಟಿ ಮುಖವನ್ನು ಮುಟ್ಟದಿರಿ.