ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ಚರ್ಮದ ಅಲರ್ಜಿಗಳು. ಇದರ ಗುಣ ಲಕ್ಷಣಗಳೆಂದರೆ ಚರ್ಮದ ಉರಿಯೂತ, ನವೆ, ತುರಿಕೆಯಿಂದ ಕೂಡಿರುವ ಕೆಂಪು ಚರ್ಮ. ಈ ರೀತಿಯ ಅಲರ್ಜಿಗಳು ದೇಹದ ಯಾವುದೇ ಭಾಗದಲ್ಲೂ ಕಾಣಿಸಿಕೊಳ್ಳಬಹುದು.
ಕೆಲವೊಮ್ಮೆ ಈ ರೋಗ ಲಕ್ಷಣಗಳು ಅತೀ ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಚರ್ಮರೋಗ ತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ.
ಕೆಲವೊಮ್ಮೆ ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಗೆ ಒಡ್ಡಿದಾಗ, ಇದರಲ್ಲಿರುವ ಎನ್ಜಿಮಾ ಸಹ ಈ ಅಲರ್ಜಿಗೆ ಕಾರಣವಾಗಬಹುದು. ಇದಕ್ಕೆ ಪರಿಹಾರವಾಗಿ ನಾವು ಸ್ಕಿನ್ ಆಯಿಂಟ್ಮೆಂಟ್ ಗಳ ಮೊರೆ ಹೋಗುತ್ತೇವೆ.
ಆದರೆ ಅದರಲ್ಲಿ ಬಹುಪಾಲು ರಾಸಾಯನಿಕಗಳಿಂದ ಕೂಡಿದ್ದು, ಇನ್ನೂ ಹಾನಿಯಾಗುವ ಸಂಭವ ಹೆಚ್ಚು. ಆದ್ದರಿಂದ ಇಲ್ಲಿರುವ ಕೆಲವು ನೈಸರ್ಗಿಕ ಪರಿಹಾರಗಳನ್ನು ಬಳಸುವುದರಿಂದ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.
ರೋಸ್ ವಾಟರ್ : ತ್ವಚೆಯ ಸಮಸ್ಯೆಗಳಿಗೆ ಇದು ಉತ್ತಮವಾದ ಪರಿಹಾರವಾಗಿದ್ದು, ಅಲರ್ಜಿಯಾಗಿರುವ ಜಾಗದಲ್ಲಿ ಪ್ರತಿ ದಿನ ರೋಸ್ ವಾಟರ್ ಅನ್ನು ಲೇಪಿಸಿ. 15-20 ನಿಮಿಷದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.
ಐಸ್ ಕ್ಯೂಬ್ಸ್ : ಚರ್ಮವನ್ನು ಬಿಗಿತಗೊಳಿಸುವಲ್ಲಿ ಇದು ಅದ್ಭುತವಾದ ಕೆಲಸವನ್ನು ಮಾಡುತ್ತದೆ. ಸ್ಕಿನ್ ಅಲರ್ಜಿಯಿಂದ ಕಿರಿಕಿರಿಯಾಗುತ್ತಿದ್ದರೆ, ಒಂದು ತೆಳುವಾದ ಬಟ್ಟೆಯಲ್ಲಿ ಕೆಲವು ಐಸ್ ಕ್ಯೂಬ್ ಗಳನ್ನು ಹಾಕಿಕೊಳ್ಳಿ. ನಂತರ ನಿಧಾನವಾಗಿ ಮಸಾಜ್ ಮಾಡಿದರೆ, ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು.
ಮಜ್ಜಿಗೆ : ಚರ್ಮದ ಮೇಲಿನ ಸೋಂಕುಗಳಿಗೆ ಇದು ಬೆಸ್ಟ್ ಚಿಕಿತ್ಸೆಯಾಗಿದೆ. ಶುದ್ಧವಾದ ಮಜ್ಜಿಗೆಯಿಂದ ಮುಖವನ್ನು ತೊಳೆದುಕೊಂಡು, 10-15 ನಿಮಿಷಗಳವರೆಗೆ ಅದನ್ನು ಹಾಗೆಯೇ ಒಣಗಲು ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ.