‘ಮೈಗ್ರೇನ್’ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ. ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಈ ನೋವು ಅನೇಕ ಗಂಟೆಗಳ ಕಾಲ ಕಾಡುತ್ತದೆ.
ನೋವು ಸಹಿಸಲಾಗದೆ ವ್ಯಕ್ತಿ ನರಳಾಡುತ್ತಾನೆ. ನೋವು ನಿವಾರಕ ಮಾತ್ರೆಗಳು ನೋವನ್ನು ಕೆಲವೊಮ್ಮೆ ಕಡಿಮೆ ಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಮಾತ್ರೆಗಳನ್ನು ಹೊರತುಪಡಿಸಿ ಮೈಗ್ರೇನ್ ಗೆ ಕೆಲವೊಂದು ಮದ್ದಿದೆ.
ಮೈಗ್ರೇನ್ ನಿಂದ ಬಳಲುವವರು ಔಷಧಿ ಎಣ್ಣೆಯನ್ನು ಬಳಸಬಹುದು. ಪುದೀನಾ ಎಣ್ಣೆ ಮೈಗ್ರೇನ್ ಗೆ ಒಳ್ಳೆ ಮದ್ದು. ಇದು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ತಲೆನೋವು ಕಡಿಮೆ ಮಾಡುತ್ತದೆ.
ಅಕ್ಯುಪಂಕ್ಚರ್ ಕೂಡ ಮೈಗ್ರೇನ್ ಕಡಿಮೆ ಮಾಡಲು ನೆರವಾಗುತ್ತದೆ. ಅಕ್ಯುಪಂಕ್ಚರ್ ಪ್ರಾಚೀನ ಚೀನೀ ತಂತ್ರಜ್ಞಾನವಾಗಿದೆ. ಇದರಲ್ಲಿ ವೈದ್ಯರು ರೋಗದ ಪ್ರಕಾರ ನಿರ್ದಿಷ್ಟ ಸ್ಥಳದಲ್ಲಿ ಸೂಜಿಯೊಂದಿಗೆ ಪಂಕ್ಚರ್ ಮಾಡ್ತಾರೆ. ಸರಿಯಾದ ವಿಧಾನದಲ್ಲಿ ಅಕ್ಯುಪಂಕ್ಚರ್ ಮಾಡಿದ್ರೆ ತಲೆನೋವು ಕಡಿಮೆಯಾಗುತ್ತದೆ.
ಉದ್ವೇಗ ಮತ್ತು ಒತ್ತಡವನ್ನು ಕಡಿಮೆ ಮಾಡಲು ಮಸಾಜ್ ಬೆಸ್ಟ್. ಮಸಾಜ್ ಸ್ನಾಯುವಿನ ಸೆಳೆತವನ್ನು ಕಡಿಮೆ ಮಾಡುತ್ತದೆ. ಇದ್ರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ವಿಶೇಷವಾಗಿ ತಲೆನೋವು ಮತ್ತು ಬೆನ್ನುನೋವಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.