alex Certify ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಸಿಡಿಟಿ ಎಲ್ಲರನ್ನೂ ಕಾಡುವ ಸಮಸ್ಯೆ. ಚಿಕ್ಕ ಮಕ್ಕಳಿಗೂ ಬರುತ್ತದೆ. ದೊಡ್ಡವರನ್ನೂ ಕಾಡುತ್ತದೆ. ಗ್ಯಾಸ್ಟ್ರಿಕ್ ಬಾರದಂತೆ ಸರಿಯಾದ ಆಹಾರ ಕ್ರಮ , ಜೀವನ ಶೈಲಿ ಅನುಸರಿಸಿದರೆ ನಿಮ್ಮ ಹತ್ತಿರ ಕೂಡಾ ಸುಳಿಯುವುದಿಲ್ಲ.

* ಕೆಲವು ತರಕಾರಿ ಅಥವಾ ಆಹಾರ ಪದಾರ್ಥ ಆಸಿಡಿಟಿ ಉಂಟು ಮಾಡುತ್ತದೆ ಅಂದರೆ ಅವುಗಳ ಸೇವನೆಯನ್ನು ನಿಲ್ಲಿಸಿಬಿಡಿ.

* ಅವಸರದಲ್ಲಿ ಊಟ ಮಾಡಬೇಡಿ. ಊಟ ಮಾಡಿದ ತಕ್ಷಣ ನಿದ್ದೆ ಮಾಡಬೇಡಿ.

* ಟೀ – ಕಾಫಿ ಅವೈಡ್‌ ಮಾಡಿ. ಹುರಿದ ಆಹಾರ ಪದಾರ್ಥ, ಉಪ್ಪಿನಕಾಯಿ, ವಿಪರೀತ ಖಾರದ ಆಹಾರ ಪದಾರ್ಥ, ವಿನೆಗರ್‌ ಮತ್ತು ಚಾಕಲೇಟ್‌ ಅತಿಯಾದ ಸೇವನೆ ಬೇಡ.

* ಪಾಲಾಕ್‌ ಸೊಪ್ಪು, ಮೆಂತ್ಯೆ, ಎಲೆಕೋಸು, ಹೂಕೋಸು ಆಹಾರದಲ್ಲಿ ಹೆಚ್ಚಿರಲಿ. ಇವುಗಳಲ್ಲಿ ಮಿನರಲ್‌ ಮತ್ತು ಪೋಷಕಾಂಶಗಳು ದೊರೆಯುತ್ತವೆ.

* ಮೊಟ್ಟೆಯ ಬಿಳಿ ಭಾಗ ನಿಮ್ಮ ಆಹಾರದೊಂದಿಗಿರಲಿ. ಇದು ಬೇಗನೆ ಜೀರ್ಣಗೊಳ್ಳುತ್ತದೆ.

* ಕೆಂಪಕ್ಕಿ ಅನ್ನ ಸುಲಭವಾಗಿ ಜೀರ್ಣವಾಗುತ್ತದೆ. ಬಿಳಿ ಅಕ್ಕಿಗಿಂತ ಕೆಂಪಕ್ಕಿ ಅನ್ನ ಆರೋಗ್ಯಕ್ಕೆ ಒಳ್ಳೆಯದು.

* ನಿತ್ಯ ಬಾಳೆಹಣ್ಣು ಸೇವಿಸಿ.

* ಪುದೀನಾ ಜ್ಯೂಸ್‌, ಕ್ಯಾಬೇಜ್‌ ಜ್ಯೂಸ್‌ ನಿತ್ಯ ಸೇವಿಸುವುದರಿಂದ ಆಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ.

* ನೀರನ್ನು ಹೆಚ್ಚಾಗಿ ಕುಡಿಯಬೇಕು. ನಿತ್ಯ ಎಳೆನೀರು ಹಾಗೂ ಹಾಲು ಕುಡಿದರೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...