ಬೇಕಾಗುವ ಸಾಮಗ್ರಿ:
ದೊಡ್ಡದಾಗಿ ಹೆಚ್ಚಿಕೊಂಡ ಟೊಮೆಟೊ – 3, ಹಸಿ ಮೆಣಸು – 2, ಎಣ್ಣೆ 2 ಚಮಚ, ಸಾಸಿವೆ – ಸ್ವಲ್ಪ, ಕರಿಬೇವಿನ ಸೊಪ್ಪು – 6 ರಿಂದ 8 ಎಲೆ, ಒಣಮೆಣಸು – 1, ಬೆಳ್ಳುಳ್ಳಿ 3, ಇಂಗು – 1ಚಿಟಿಕೆ, ಅರಿಶಿಣ – 1/4 ಚಮಚ, ತುಪ್ಪ – 1 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ನೀರು – 1 ಕಪ್
ಮಾಡುವ ವಿಧಾನ :
ಟೊಮ್ಯಾಟೋ ಹಾಗೂ ಹಸಿ ಮೆಣಸನ್ನ ನುಣ್ಣಗೆ ರುಬ್ಬಿಕೊಳ್ಳಿ. ಈಗ ಇನ್ನೊಂದು ಪಾತ್ರೆಗೆ ಎಣ್ಣೆಯನ್ನ ಹಾಕಿಕೊಂಡು ಇದಕ್ಕೆ ಸಾಸಿವೆ, ಕರಿಬೇವಿನ ಸೊಪ್ಪು, ಒಣಮೆಣಸು, ಜಜ್ಜಿದ ಬೆಳ್ಳುಳ್ಳಿ ಹಾಗೂ ಇಂಗನ್ನ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
ಈಗ ರುಬ್ಬಿದ ಟೊಮ್ಯಾಟೋ ಹಾಗೂ ಮೆಣಸಿನ ಮಿಶ್ರಣವನ್ನ ಹಾಕಿ. ಇದಕ್ಕೆ ಅರಿಶಿಣವನ್ನ ಹಾಕಿ. ಮುಚ್ಚಳವನ್ನ ಮುಚ್ಚಿ. ಇದು ಕುದಿಯುತ್ತಿದ್ದಂತೆಯೇ ಮುಚ್ಚಳ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಹಾಗೂ ರಸಂ ಪೌಡರ್ ಹಾಕಿ. ಇದೀಗ ಸಾರಿನ ಹದಕ್ಕೆ ನೀರನ್ನ ಹಾಕಿ. ಒಂದು 5 ನಿಮಿಷ ಕಾಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ 1 ಚಮಚ ತುಪ್ಪವನ್ನ ಹಾಕಿ. ಈ ರೀತಿ ಮಾಡೋದ್ರ ಮೂಲಕ ಐದೇ ನಿಮಿಷದಲ್ಲಿ ಸಾಂಬಾರ್ನ್ನ ತಯಾರಿಸಬಹುದು.