ಚುಮು ಚುಮು ಚಳಿಗೆ ಬಿಸಿ ಬಿಸಿಯಾದ ಸೂಪ್ ಹೀರುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ಲಿಂಬೆ ಹಣ್ಣಿನ ಸೂಪ್ ಮಾಡುವ ವಿಧಾನ ಇದೆ. ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
1 ಟೇಬಲ್ ಸ್ಪೂನ್-ಲಿಂಬೆ ಹಣ್ಣಿನ ರಸ, ¼ ಕಪ್-ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಹಚ್ಚಿಡಿ), 2 ಟೀ ಸ್ಪೂನ್-ಎಣ್ಣೆ, 2 ಟೀ ಸ್ಪೂನ್-ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ, 2 ಟೀ ಸ್ಪೂನ್-ಹಸಿಮೆಣಸು ಸಣ್ಣದಾಗಿ ಕತ್ತರಿಸಿದ್ದು, ¼-ಕತ್ತರಿಸಿದ ಈರುಳ್ಳಿ, ¼ ಕಪ್-ಕತ್ತರಿಸಿದ ಕ್ಯಾಬೇಜ್, ¼ ಕಪ್- ಕತ್ತರಿಸಿದ ಕ್ಯಾರೆಟ್, 3-ಕಪ್- ವೆಜಿಟೇಬಲ್ ಸ್ಟಾಕ್, ಉಪ್ಪು-ರುಚಿಗೆ ತಕ್ಕಷ್ಟು, 2 ಟೀ ಸ್ಪೂನ್- ಕಾರ್ನ್ ಫ್ಲೋರ್, 2 ಟೇಬಲ್ ಸ್ಪೂನ್ ನೀರು (ಕಾರ್ನ್ ಫ್ಲೋರ್ ಅನ್ನು 2 ಟೇಬಲ್ ಸ್ಪೂನ್ ನೀರಿನಲ್ಲಿ ಕರಗಿಸಿಕೊಳ್ಳಿ).
ಮಾಡುವ ವಿಧಾನ:
ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ ನಂತರ ಈರುಳ್ಳಿ ಹಾಕಿ 2 ನಿಮಿಷಗಳ ಕಾಲ ಕೈಯಾಡಿಸಿ. ನಂತರ ಇದಕ್ಕೆ ಕ್ಯಾಬೇಜ್, ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿ ನಂತರ ವೆಜಿಟೇಬಲ್ ಸ್ಟಾಕ್, ಲಿಂಬೆಹಣ್ಣಿನ ರಸ, ನೀರಿನಲ್ಲಿ ಮಿಕ್ಸ್ ಮಾಡಿದ ಕಾರ್ನ್ ಫ್ಲೋರ್, ಉಪ್ಪು, ಕೊತ್ತಂಬರಿಸೊಪ್ಪು ಹಾಕಿ ಚೆನ್ನಾಗಿ 3 ನಿಮಿಷಗಳ ಕಾಲ ಕುದಿಸಿ ಗ್ಯಾಸ್ ಆಫ್ ಮಾಡಿ. ಬಿಸಿ ಬಿಸಿ ಇರುವಾಗಲೇ ಕುಡಿಯಿರಿ.