ಚಕ್ರಮುನಿ ಸೊಪ್ಪಿನ ಹೆಸರನ್ನು ಅಷ್ಟಾಗಿ ಯಾರೂ ಕೇಳಿರುವುದಿಲ್ಲ. ಆರೋಗ್ಯಕ್ಕೆ ಪೂರಕವಾದ ಈ ಸೊಪ್ಪಿನಿಂದ ಹಲವಾರು ವೆರೈಟಿ ವೆರೈಟಿ ತಿಂಡಿಗಳನ್ನು ಮಾಡಿ ಸವಿಯಲಾಗುತ್ತದೆ.
ಅಂತಹ ಅನೇಕ ತಿನಿಸುಗಳಲ್ಲಿ ಒಂದು ಚಕ್ರಮುನಿ ಸೊಪ್ಪಿನ ಬೋಂಡಾ. ಸುಲಭವಾಗಿ ಬೋಂಡಾ ಮಾಡಿ ತಿನ್ನಬೇಕು ಅಂತಿದ್ದರೆ ಇಲ್ಲಿದೆ ಅದನ್ನು ತಯಾರಿಸುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಚಕ್ರಮುನಿ ಸೊಪ್ಪು – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1/2 ಕಪ್
ಕಡಲೆ ಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಚಮಚ
ಅಚ್ಚಖಾರದ ಪುಡಿ – 1 ಚಮಚ
ಗರಂ ಮಸಾಲೆ ಪುಡಿ – 1/4 ಚಮಚ
ಇಂಗು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಸಣ್ಣಗೆ ಹೆಚ್ಚಿದ ಚಕ್ರಮುನಿ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಕಡಲೆಹಿಟ್ಟು, ಅಕ್ಕಿಹಿಟ್ಟು, ಅಚ್ಚಖಾರದ ಪುಡಿ, ಗರಂ ಮಸಾಲೆ ಪುಡಿ, ಇಂಗು, ಉಪ್ಪು, ಸ್ವಲ್ಪ ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಸಣ್ಣ ಸಣ್ಣ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರೆದರೆ ಚಕ್ರಮುನಿ ಸೊಪ್ಪಿನ ಬೋಂಡಾ ಕಾಫಿ ಟೀ ಜೊತೆ ಸವಿಯಲು ಸಿದ್ಧ.