ಸಾಂಬಾರು ಮಾಡುವುದಕ್ಕೆ ಏನೂ ಇಲ್ಲ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ…? ಇಲ್ಲಿ ಯಾವುದೇ ತರಕಾರಿ ಬಳಸದೇ ಸುಲಭವಾಗಿ ಮಾಡುವ ಮಜ್ಜಿಗೆ ರಸಂ ಇದೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಹುಳಿ ಮೊಸರು – 1 ಕಪ್, ನೀರು – 1/2 ಕಪ್, ಅರಿಶಿನ – 1 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಧನಿಯಾ ಬೀಜ – 1 ಟೇಬಲ್ ಸ್ಪೂನ್, ತೊಗರಿಬೇಳೆ – 1 ಟೇಬಲ್ ಸ್ಪೂನ್, ಕಾಳುಮೆಣಸು – 1 ಟೀ ಸ್ಪೂನ್, ಜೀರಿಗೆ – 1 ಟೀ ಸ್ಪೂನ್,
ಒಗ್ಗರಣೆಗೆ: ಎಣ್ಣೆ – 1 ಟೀ ಸ್ಪೂನ್, ಸಾಸಿವೆ – 1 ಟೀ ಸ್ಪೂನ್, ಜೀರಿಗೆ – 1/2 ಟೀ ಸ್ಪೂನ್, ಇಂಗು – 1/4 ಟೀ ಸ್ಪೂನ್, ಒಣಮೆಣಸು – 1, ಕರಿಬೇವು – 5 ಎಸಳು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಧನಿಯಾ ಬೀಜ, ತೊಗರಿಬೇಳೆ, ಕಾಳುಮೆಣಸು, ಜೀರಿಗೆ ಹಾಕಿ ಪರಿಮಳ ಬರುವವರೆಗೆ ಹುರಿದುಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಗೆ ಮೊಸರು ಹಾಕಿ ಅದಕ್ಕೆ ನೀರು ಸೇರಿಸಿ ಅರಿಶಿನ, ಉಪ್ಪು, ಪುಡಿ ಮಾಡಿಕೊಂಡು ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಗ್ಯಾಸ್ ಮೇಲೆ ಒಗ್ಗರಣೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ, ಜೀರಿಗೆ, ಇಂಗು, ಒಣಮೆಣಸು, ಕರಿಬೇವು ಹಾಕಿ ಈ ಒಗ್ಗರಣೆಯನ್ನು ಮಜ್ಜಿಗೆ ಮಿಶ್ರಣಕ್ಕೆ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಇಟ್ಟು ಕುದಿಸಿ ಗ್ಯಾಸ್ ಆಫ್ ಮಾಡಿ.