ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಆತ ಸತ್ತಾಗ ಮನೆಯಲ್ಲಿ ದುಃಖದ ವಾತಾವರಣವಿರುತ್ತದೆ. ಶವದ ಅಂತ್ಯಸಂಸ್ಕಾರ ಮಾಡಿ ಮುಕ್ತಿ ಬಯಸಲಾಗುತ್ತದೆ. ಆದ್ರೆ ಫ್ರಾನ್ಸ್ ನಲ್ಲಿ ಶವಗಳ ಮದುವೆ ನಡೆಯುತ್ತದೆ. ಸತ್ತ ವ್ಯಕ್ತಿ ಜೊತೆ ಮದುವೆ ನಡೆಯುತ್ತಿದೆ. ಈ ಮದುವೆಗೆ ಕೆಲ ಷರತ್ತುಗಳಿವೆ. ದೊಡ್ಡ ಕಾರಣದ ಜೊತೆ ರಾಷ್ಟ್ರಪತಿಗಳ ಅನುಮತಿ ಪಡೆದು ಮದುವೆ ಮಾಡಬೇಕು.
1950ರಲ್ಲಿ ಜಾರಿಗೆ ಬಂದ ಫ್ರಾನ್ಸ್ ಕಾನೂನಿನ ಪ್ರಕಾರ, ಮೃತ ಪ್ರೇಮಿ ಜೊತೆ ಮದುವೆಯಾಗಬಹುದು. ಇದಕ್ಕೆ ರಾಷ್ಟ್ರಪತಿ ಅನುಮತಿ ಪಡೆಯಬೇಕು. ವಿವಾಹ ಸಂದರ್ಭದಲ್ಲಿ ಸತ್ತ ವ್ಯಕ್ತಿಯ ಫೋಟೋವನ್ನು ಬಳಸಲಾಗುತ್ತದೆ. ಆದ್ರೆ ಸಾಯುವವರೆಗೆ ನಾವಿಬ್ಬರೂ ಒಂದಾಗಿರೋಣ ಎಂಬ ಪದವನ್ನು ಮದುವೆ ಸಂದರ್ಭದಲ್ಲಿ ಬಳಸಲಾಗುವುದಿಲ್ಲ.
ಹಸುಗೂಸಿನ ಗಾತ್ರವಿದೆ ಈ ದೈತ್ಯ ಕಪ್ಪೆ….!
ವಿವಾಹವಾಗುವ ವ್ಯಕ್ತಿಗಳು ಕೆಲವೊಂದು ನಿಯಮ ಪಾಲನೆ ಮಾಡಬೇಕು. ಅನುವಂಶಿಕ ಆಸ್ತಿ ಅವರಿಗೆ ಸಿಗುವುದಿಲ್ಲ. ಇಬ್ಬರ ನಡುವೆ ಯಾವುದೇ ವೈವಾಹಿಕ ಸಂಪತ್ತಿಲ್ಲವೆಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಫ್ರಂಚ್ ಸರ್ಕಾರಕ್ಕೆ ಸಾಕಷ್ಟು ಅರ್ಜಿಗಳು ಬರುತ್ತವೆ. ಆದ್ರೆ ಎಲ್ಲರಿಗೂ ಅನುಮತಿ ನೀಡಲಾಗುವುದಿಲ್ಲ. ಕಾನೂನುಬದ್ಧವಾಗಿರುವವರಿಗೆ ಮಾತ್ರ ಮದುವೆಗೆ ಅನುಮತಿ ನೀಡಲಾಗುತ್ತದೆ.