ಜಗತ್ತಿನಲ್ಲಿ ಸಾಕಷ್ಟು ಸಿರಿವಂತರಿದ್ದಾರೆ. ದೇಶಕ್ಕಿಂತಲೂ ಶ್ರೀಮಂತಿಕೆ ಹೊಂದಿರುವ ಅನೇಕರು ಗಮನ ಸೆಳೆಯುತ್ತಾರೆ. ವಿಶೇಷ ಅಂದ್ರೆ ಇವರ ಬಳಿಯಿರೋ ಆಸ್ತಿ ಅನೇಕ ದೇಶಗಳ ಜಿಡಿಪಿಗಿಂತಲೂ ಹೆಚ್ಚು. ಸಣ್ಣ ದೇಶಗಳ ಆರ್ಥಿಕತೆಯನ್ನು ನಿಭಾಯಿಸುವಷ್ಟು ಸಂಪತ್ತು ಅವರ ಬಳಿಯಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವದ ಟಾಪ್ ಟೆನ್ ಶ್ರೀಮಂತರು ಯಾರು ? ಅವರ ಬಳಿ ಎಷ್ಟು ಸಂಪತ್ತಿದೆ ಅನ್ನೋದನ್ನು ನೋಡೋಣ.
ಎಲಾನ್ ಮಸ್ಕ್ – ಟೆಸ್ಲಾ ಸಿಇಒ, ಸ್ಪೇಸ್‌ಎಕ್ಸ್ ಮತ್ತು ಎಕ್ಸ್‌ನ ಮಾಲೀಕ ಎಲಾನ್ ಮಸ್ಕ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ? ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಎಲಾನ್ ಮಸ್ಕ್ ಅವರ ಆಸ್ತಿ ಸುಮಾರು 229 ಬಿಲಿಯನ್ ಡಾಲರ್.
ಬರ್ನಾರ್ಡ್ ಅರ್ನಾಲ್ಟ್ – ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್ ಅರ್ನಾಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಮೊಯೆಟ್ ಹೆನ್ನೆಸ್ಸಿ ಲೂಯಿ ವಿಟಾನ್ ಸಿಇಓ ಅವರ ಬಳಿಯಿರೋ ಒಟ್ಟಾರೆ ಆಸ್ತಿ ಸುಮಾರು 173 ಬಿಲಿಯನ್ ಡಾಲರ್.
ಜೆಫ್ ಬೆಜೋಸ್ – ಜೆಫ್ ಬೆಜೋಸ್ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್‌ರ ಸಂಪತ್ತು ಪ್ರಸ್ತುತ 162 ಬಿಲಿಯನ್ ಡಾಲರ್.
ಲ್ಯಾರಿ ಎಲ್ಲಿಸನ್ – 1977ರಲ್ಲಿ ಒರಾಕಲ್ ಸ್ಥಾಪನೆಯ ಸಂದರ್ಭದಲ್ಲಿ ಲ್ಯಾರಿ ಎಲಿಸನ್ ಅವರ ಕೊಡುಗೆ ಸಾಕಷ್ಟಿತ್ತು. ಇವರು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ. ಪ್ರಸ್ತುತ ಅವರ ನಿವ್ವಳ ಮೌಲ್ಯ 139 ಬಿಲಿಯನ್ ಡಾಲರ್.
ಬಿಲ್ ಗೇಟ್ಸ್ – ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ನಿವ್ವಳ ಮೌಲ್ಯ 128 ಬಿಲಿಯನ್ ಡಾಲರ್‌ನಷ್ಟಿದೆ. ವಿಶೇಷವೆಂದರೆ ಅವರು ದಾನಿ ಎಂದೂ ಹೆಸರಾಗಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಲ್ಯಾರಿ ಪೇಜ್ – ಲ್ಯಾರಿ ಪೇಜ್ ಅವರ ನಿವ್ವಳ ಆಸ್ತಿ ಮೌಲ್ಯ ಪ್ರಸ್ತುತ 122 ಬಿಲಿಯನ್ ಡಾಲರ್‌ನಷ್ಟಿದೆ. ಅವರು 1998ರಲ್ಲಿ ಗೂಗಲ್ ಅನ್ನು ಸ್ಥಾಪಿಸಿದರು. ಈ ವರ್ಷ ಇದುವರೆಗೆ ಅವರ ಸಂಪತ್ತು 39.5 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿದೆ.
ವಾರೆನ್ ಬಫೆಟ್ – ವಾರೆನ್ ಬಫೆಟ್ ಅವರ ಸಂಪತ್ತು ಪ್ರಸ್ತುತ ಸುಮಾರು 122 ಶತಕೋಟಿ ಡಾಲರ್. ಅವರು ವಿಶ್ವದ ನುರಿತ ಹೂಡಿಕೆದಾರರೆಂದೇ ಫೇಮಸ್. ವೈವಿಧ್ಯತೆಯ ಬಂಡವಾಳ ಹೂಡಿಕೆಯಲ್ಲಿ ಎಲ್ಲರೂ ಅವರ ಸಲಹೆಯನ್ನು ತೆಗೆದುಕೊಳ್ಳುತ್ತಾರೆ.
ಸೆರ್ಗಯಿ ಬ್ರಿನ್ – ಲ್ಯಾರಿ ಪೇಜ್ ಜೊತೆಗೆ ಸರ್ಚ್ ಇಂಜಿನ್ ಗೂಗಲ್ ಅನ್ನು ಹುಟ್ಟುಹಾಕಿದವರು ಸರ್ಗೆಯಿ ಬ್ರಿನ್. ಇವರ ಬಳಿಯಿರೋ ಒಟ್ಟಾರೆ ಸಂಪತ್ತು ಸುಮಾರು 116 ಬಿಲಿಯನ್ ಡಾಲರ್.
ಸ್ಟೀವ್ ಬಾಲ್ಮರ್ – ಮೈಕ್ರೋಸಾಫ್ಟ್ನ ಮಾಜಿ ಸಿಇಓ ಸ್ಟೀವ್ ಬಾಲ್ಮರ್ ಅವರು 9 ವರ್ಷಗಳ ಹಿಂದೆ 2014 ರಲ್ಲಿ ಹುದ್ದೆಯನ್ನು ತೊರೆದರು. ಬಾಲ್ಮರ್ ಅವರ ಸಂಪತ್ತು ಪ್ರಸ್ತುತ 116 ಬಿಲಿಯನ್ ಡಾಲರ್‌ನಷ್ಟಿದೆ.
ಮಾರ್ಕ್ ಜುಕರ್‌ಬರ್ಗ್ – ಫೇಸ್ಬುಕ್ ಸಿಇಓ ಮಾರ್ಕ್ ಜುಕರ್‌ಬರ್ಗ್ ಕೂಡ ಜಗತ್ತಿನ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಪ್ರಸ್ತುತ ಅವರ ಆಸ್ತಿ ಮೌಲ್ಯ 108 ಬಿಲಿಯನ್ ಡಾಲರ್. ಅವರ ಸಂಪತ್ತು ಈ ವರ್ಷ ಇಲ್ಲಿಯವರೆಗೆ 62.7 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ.