ರುಚಿಯ ಮುಂದೆ ಆರೋಗ್ಯ ಲೆಕ್ಕಕ್ಕಿಲ್ಲ ಎಂಬಂತಾಗಿದೆ ಈಗಿನ ಸ್ಥಿತಿ. ಬಹುತೇಕ ಎಲ್ಲರೂ ಆರೋಗ್ಯವನ್ನು ಲೆಕ್ಕಿಸದೇ ಟೇಸ್ಟಿ ತಿನಿಸುಗಳನ್ನು ಸವಿಯುತ್ತಾರೆ. ಪಾನಿಪುರಿ, ಗೋಲ್ಗಪ್ಪದಂತಹ ಹುಳಿ-ಖಾರಭರಿತ ಚಾಟ್ಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಈ ಮಸಾಲೆಯುಕ್ತ ಸ್ಟ್ರೀಟ್ ಫುಡ್ಗಳನ್ನು ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಆದರೆ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾಗಿ ಹುಳಿ ಸೇವಿಸಿದರೆ ಆರೋಗ್ಯಕ್ಕೆ ಆಗುವ ಹಾನಿ ಏನು ಅನ್ನೋದನ್ನು ತಿಳಿಯೋಣ.
ಜೀರ್ಣಕ್ರಿಯೆ ಸಮಸ್ಯೆ – ಹೆಚ್ಚು ಹುಳಿ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ತಿನಿಸುಗಳು ಆಮ್ಲೀಯತೆ, ಹೊಟ್ಟೆ ನೋವು ಮತ್ತು ವಾಕರಿಕೆಗೆ ಕಾರಣವಾಗಬಹುದು. ಇವುಗಳ ಬದಲಾಗಿ ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.
ಅಧಿಕ ರಕ್ತದೊತ್ತಡ – ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಆದಷ್ಟು ಹುಳಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಬಿಪಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಹೃದಯ ರೋಗಗಳು – ಭಾರತದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ಅತಿ ಹೆಚ್ಚು. ಇದಕ್ಕೆ ಹುಳಿ ಪದಾರ್ಥಗಳ ಸೇವನೆಯೂ ಒಂದು ಕಾರಣವೆಂದು ಪರಿಗಣಿಸಲಾಗಿದೆ. ಆರೋಗ್ಯ ತಜ್ಞರ ಪ್ರಕಾರ ಹೆಚ್ಚು ಹುಳಿ ಅಂಶವಿರುವ ಆಹಾರ ಸೇವನೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಮೂತ್ರಪಿಂಡಗಳ ಮೇಲೆ ಒತ್ತಡ – ಮಿತಿಗಿಂತ ಹೆಚ್ಚು ಹುಳಿ ಸೇವಿಸಿದರೆ ಕಿಡ್ನಿ ಮೇಲೆ ಒತ್ತಡ ಹೆಚ್ಚುತ್ತದೆ. ವಾಸ್ತವವಾಗಿ ಮೂತ್ರಪಿಂಡದ ಕೆಲಸವೆಂದರೆ ಫಿಲ್ಟರ್ ಮಾಡುವುದು. ಹುಳಿ ಹುಳಿ ಚಾಟ್ಸ್ ಸೇವಿಸಿದಾಗ ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು.
ಹಲ್ಲುಗಳಿಗೆ ಹಾನಿ – ಹುಳಿ ಆಹಾರವನ್ನು ಸೇವಿಸಿದಾಗಲೆಲ್ಲಾ ಅದರ ಪರಿಣಾಮವು ಹಲ್ಲಿನ ಮೇಲೆ ಗೋಚರಿಸುತ್ತದೆ. ಇದು ಪ್ರತಿಯೊಬ್ಬರಿಗೂ ಅನುಭವವಾಗಿರುತ್ತದೆ. ಹುಳಿ ಹುಳಿಯಾದ ತಿನಿಸುಗಳು ಹಲ್ಲುಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಟೊಳ್ಳಾಗಿಸುತ್ತದೆ.