ಸೇನೆ ಸೇರಬಯಸುವವರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ಅಗ್ನಿಪಥ್ ನೇಮಕಾತಿಗೆ ಆನ್‌ಲೈನ್ ನೋಂದಣಿ ಆರಂಭವಾಗಿದೆ.
ಭಾರತೀಯ ಸೇನಾ ವೆಬ್‌ಸೈಟ್ Joinindianarmy.nic.in ಮೂಲಕ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರ ಹಾಗೂ ಯಾದಗಿರಿ ಜಿಲ್ಲೆಗಳ ಪುರುಷ ಅಭ್ಯರ್ಥಿಗಳಿಗೆ ಬೆಂಗಳೂರು ಕೇಂದ್ರ ನೇಮಕಾತಿ ವಲಯದ ಬೆಳಗಾವಿಯ ಸೇನಾ ನೇಮಕಾತಿ ಅಧಿಕಾರಿಗಳ ಮೂಲಕ ಅಗ್ನಿಪಥ್ ಸೇನಾ ನೇಮಕಾತಿಗೆ ಆನ್‌ಲೈನ್ ನೋಂದಣಿಯನ್ನು ಫೆಬ್ರವರಿ 13 ರಿಂದ ಮಾರ್ಚ್ 22 ರವರೆಗೆ ನಡೆಸಲಾಗುತ್ತಿದೆ.
ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮನ್ (10 ನೇ ತರಗತಿ ಉತ್ತಿರ್ಣ ಹಾಗೂ 8ನೇ ತರಗತಿ ಉತ್ತೀರ್ಣ ಪ್ರತ್ಯೇಕ ಶ್ರೇಣಿ) ಅಗ್ನಿವೀರ್ ಆಫೀಸ್ ಅಸಿಸ್ಟಂಟ್, ಸ್ಟೋರ್ ಕೀಪರ್ ಟೆಕ್ನಿಕಲ್ ವರ್ಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಹ ವಯೋಮಿತಿ, ವಿದ್ಯಾರ್ಹತೆ, ಇತರೆ ಮಾರ್ಗಸೂಚಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಫೆಬ್ರವರಿ 12 ರಂದು ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ಹೊರಡಿಸಿದ ನೇಮಕಾತಿ ಅಧಿಸೂಚನೆಯನ್ನು ಗಮನಿಸಬೇಕು ಎಂದು ನೇಮಕಾತಿ ನಿರ್ದೇಶಕರಾದ ಕರ್ನಲ್ ನಿಶಾಂತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.