ಅಂಡರ್ ಆರ್ಮ್ಸ್ ಕಪ್ಪಾಗುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆ. ಶೇವಿಂಗ್, ವ್ಯಾಕ್ಸ್ ಹಾಗೂ ಹೆಚ್ಚು ಬೆವರಿನಿಂದಾಗಿ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಇದರಿಂದಾಗಿ ಮಹಿಳೆಯರು ತಮಗಿಷ್ಟವಾದ ಬಟ್ಟೆಯನ್ನು ತೊಡಲು ಮುಜುಗರಪಡ್ತಾರೆ. ಇನ್ಮುಂದೆ ಈ ಚಿಂತೆ ಬಿಟ್ಟು ಬಿಡಿ. ಇದಕ್ಕೆ ಮನೆಯಲ್ಲಿಯೇ ಪರಿಹಾರವಿದೆ.
ವಿಟಮಿನ್ ಸಿ ಇರುವ ಪಪ್ಪಾಯಿ, ಸೀಬೆ, ಕೋಸುಗಡ್ಡೆ, ಕಿವಿ ಮತ್ತು ಟೊಮೆಟೋಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಇದರಿಂದ ಚರ್ಮ ಬಿಗಿಯಾಗುತ್ತದೆ. ಹಾಗೆ ಕಪ್ಪು ಕಲೆಗಳು ಮಾಯವಾಗುತ್ತವೆ.
ಅಲೋವೆರಾ ಬಳಕೆಯಿಂದ ಹೈಪರ್ ಪಿಗ್ಮೆಂಟೇಶನ್ ಕಡಿಮೆಯಾಗುತ್ತದೆ. ಹೊಸ ಕೋಶಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಕಪ್ಪು ಕಲೆ ಕಡಿಮೆಯಾಗುತ್ತದೆ. ಹಾಗೆ ಅಂಡರ್ ಆರ್ಮ್ಸ್ ಗೆ ಅಲೋವೆರಾ ಜೆಲ್ ಹಚ್ಚುವುದರಿಂದ ಚರ್ಮ, ಸ್ವಚ್ಛ ಹಾಗೂ ಕೋಮಲವಾಗುತ್ತದೆ.
ಒಂದು ಚಮಚ ಅಡುಗೆ ಸೋಡಾಕ್ಕೆ ಗುಲಾಬಿ ರಸವನ್ನು ಸೇರಿಸಿ ಗಟ್ಟಿಯಾದ ಮಿಶ್ರಣ ತಯಾರಿಸಿ. ಕಪ್ಪಾದ ಸ್ಥಳಕ್ಕೆ ಈ ಮಿಶ್ರಣವನ್ನು ಹಚ್ಚಿ, ಐದು ನಿಮಿಷ ಮಸಾಜ್ ಮಾಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಆಲೂಗಡ್ಡೆಯನ್ನು ಕತ್ತರಿಸಿ ಕಪ್ಪಗಿರುವ ಜಾಗಕ್ಕೆ 10-15 ನಿಮಿಷ ಮಸಾಜ್ ಮಾಡಿ. ಒಣಗಿದ ನಂತ್ರ ಬಿಸಿ ನೀರಿನಲ್ಲಿ ತೊಳೆಯಿರಿ.