1 ಕಪ್ ಕಡಲೆ
1 ಕ್ಯಾಪ್ಸಿಕಂ (ಹೆಚ್ಚಿದ್ದು)
2 ಬಿಳಿ ಈರುಳ್ಳಿ
1 ಬೆಳ್ಳುಳ್ಳಿ
2 ಚಮಚ ಸಿಜ್ವಾನ್ ಸಾಸ್
1 ಚಮಚ ಹಸಿ ಮೆಣಸಿನಕಾಯಿ ಪೇಸ್ಟ್
2-3 ಹಸಿ ಮೆಣಸಿನಕಾಯಿ
ರುಚಿಗೆ ತಕ್ಕಷ್ಟು ಉಪ್ಪು
1 ಈರುಳ್ಳಿ
1 ಕ್ಯಾರೆಟ್
ಸ್ವಲ್ಪ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)
1 ಕಪ್ ಜೋಳದ ಹಿಟ್ಟು
1 ಚಮಚ ಸೋಯಾ ಸಾಸ್
2 ಚಮಚ ಟೊಮೆಟೊ ಚಿಲ್ಲಿ ಸಾಸ್
ಬಟಾಣಿ, ಸ್ಪ್ರಿಂಗ್ ಆನಿಯನ್ ಅಲಂಕಾರಕ್ಕೆ
ಮಾಡುವ ವಿಧಾನ
ಕಡಲೆಯನ್ನು ನೀರಿನಲ್ಲಿ ನೆನೆ ಹಾಕಿ. ಬಳಿಕ ಕಡಲೆಯ ನೀರನ್ನು ಸೋಸಿ ಅದರ ಮೇಲೆ ಸ್ವಲ್ಪ ಜೋಳದ ಹಿಟ್ಟು, ಸ್ವಲ್ಪ ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ ಫ್ರೀಜರ್ನಲ್ಲಿ 15-20 ನಿಮಿಷ ಇಡಿ.
ಅಡುಗೆ ಸೆಮಿ ಗ್ರೇವಿ ಆಗುವಷ್ಟು ನೀರು ತೆಗೆದುಕೊಂಡು ಅದರಲ್ಲಿ ಟೊಮೆಟೊ ಕೆಚಪ್, ಸಿಜ್ವಾನ್ ಸಾಸ್, ಹಸಿ ಮೆಣಸಿನಕಾಯಿ ಪೇಸ್ಟ್, ಸೋಯಾ ಸಾಸ್ 1 ಚಮಚ ಜೋಳದ ಹಿಟ್ಟು, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ.
ಈಗ ಪ್ಯಾನ್ ಬಿಸಿ ಮಾಡಿ, ಅದರಲ್ಲಿ 1 ಕಪ್ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಫ್ರೀಜರ್ನಲ್ಲಿಟ್ಟ ಕಡಲೆ ಹಾಕಿ ಡೀಪ್ ಫ್ರೈ ಮಾಡಿ. ನಂತರ ಕ್ರಿಸ್ಪಿಯಾದ ಕಡಲೆಯನ್ನು ಎಣ್ಣೆಯಿಂದ ತೆಗೆದು ಒಂದು ಬೌಲ್ನಲ್ಲಿ ಹಾಕಿಡಿ.
ಮತ್ತೆ ಪ್ಯಾನ್ ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ನಂತರ ಬಿಳಿ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಹಾಕಿ, ನಂತರ ಕ್ಯಾರೆಟ್ ಹಾಗೂ ಕ್ಯಾಪ್ಸಿಕಂ ಹಾಕಿ.
ಎಲ್ಲಾ ತರಕಾರಿ ಬೆಂದ ಮೇಲೆ ಮಿಕ್ಸ್ ಮಾಡಿ ಸಾಸ್ ಮತ್ತು ನೀರು ಹಾಕಿ ಕುದಿಸಿ. ಕುದಿ ಬರುವಾಗ ಚಿಟಿಕೆಯಷ್ಟು ಉಪ್ಪು ಹಾಕಿ. ಮಿಶ್ರಣ ಕುದಿ ಬರುವಾಗ ಕೊನೆಯಲ್ಲಿ ಫ್ರೈ ಮಾಡಿದ ಬಟಾಣಿ, ಸ್ಪ್ರಿಂಗ್ ಆನಿಯನ್ ಹಾಕಿ ಮಿಕ್ಸ್ ಮಾಡಿದರೆ ಚೈನೀಸ್ ಶೈಲಿಯಲ್ಲಿ ಕಡಲೆ ಸೆಮಿ ಗ್ರೇವಿ ರೆಡಿ.