ಪ್ರತಿ ತಿಂಗಳು ಸಂಭವಿಸುವ ಮುಟ್ಟು ಮಹಿಳೆಯರ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಾಮಾನ್ಯ ಮತ್ತು ಅಗತ್ಯ ಅಂಶವಾಗಿದೆ. ಪ್ರತಿ ತಿಂಗಳು ಬರುವ ಪಿರಿಯಡ್ಸ್ ಅನೇಕ ಮಹಿಳೆಯರಿಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ಕೆಲವರು ಭಾರೀ ರಕ್ತಸ್ರಾವದಿಂದ ತೊಂದರೆ ಅನುಭವಿಸುತ್ತಾರೆ. ಕೆಲವರಿಗೆ ಕೇವಲ ಮೂರ್ನಾಲ್ಕು ದಿನಗಳ ಕಾಲ ರಕ್ತಸ್ರಾವವಾದರೆ, ಇನ್ನು ಕೆಲವರಿಗೆ ವಾರಗಟ್ಟಲೆ ರಕ್ತಸ್ರಾವ ಆಗಬಹುದು. ಇದನ್ನು ಮೆನೊರ್ಹೇಜಿಯಾ ಎಂದು ಕರೆಯಲಾಗುತ್ತದೆ. ಈ ರೀತಿಯ ಅಧಿಕ ರಕ್ತಸ್ರಾವದ ಸಮಸ್ಯೆ ಇದ್ದಲ್ಲಿ ಕೆಲವು ಮನೆಮದ್ದುಗಳನ್ನು ಸಹ ಅನುಸರಿಸಬೇಕು.
ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವ ಏಕೆ ಸಂಭವಿಸುತ್ತದೆ?
ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವಕ್ಕೆ ಹಲವು ಕಾರಣಗಳಿರಬಹುದು. ಇದು ಮುಖ್ಯವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಹಾರ್ಮೋನುಗಳ ಅಸಮತೋಲನ, ಗರ್ಭಾಶಯದಲ್ಲಿ ಫೈಬ್ರಾಯ್ಡ್‌ಗಳ ರಚನೆ, ಗರ್ಭಾಶಯದಲ್ಲಿ ಎಂಡೊಮೆಟ್ರಿಯೊಸಿಸ್‌ಗೆ ಸಂಬಂಧಿಸಿದೆ. ಇದಲ್ಲದೆ ಕೆಲವೊಮ್ಮೆ ರಕ್ತ ಹೆಪ್ಪುಗಟ್ಟುವಿಕೆಯಿಂದಲೂ ಈ ರೀತಿ ಆಗಬಹುದು. ಕೆಲವು ಔಷಧಿಗಳ ಸೇವನೆ ಕೂಡ ರಕ್ತಸ್ರಾವವನ್ನು ಹೆಚ್ಚಿಸಬಹುದು.
ಅಧಿಕ ರಕ್ತಸ್ರಾವದ ಲಕ್ಷಣಗಳು…
ಪ್ರತಿ ಗಂಟೆಗೆ ಪ್ಯಾಡ್ ಬದಲಾಯಿಸುವ ಅಗತ್ಯತೆ
ದೌರ್ಬಲ್ಯ ಮತ್ತು ಆಯಾಸ
ತಲೆತಿರುಗುವಿಕೆ ಮತ್ತು ದಣಿದ ಭಾವನೆ
ರಕ್ತಹೀನತೆಯ ಸಮಸ್ಯೆ
ಭಾರೀ ರಕ್ತಸ್ರಾವಕ್ಕೆ ಮನೆಮದ್ದು…
ದಾಲ್ಚಿನ್ನಿ: ದಾಲ್ಚಿನ್ನಿ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ. ನಂತರ ಒಂದು ಲೋಟ ನೀರಿನಲ್ಲಿ ಸ್ವಲ್ಪ ದಾಲ್ಚಿನ್ನಿ ಹಾಕಿ ಕುದಿಸಿ. ಇದನ್ನು ದಿನಕ್ಕೆ 1-2 ಬಾರಿ ಸೇವಿಸಿ.
ಮೆಗ್ನೀಸಿಯಮ್-ಕಬ್ಬಿಣ ಭರಿತ ಆಹಾರ ಸೇವನೆ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯು ಭಾರೀ ರಕ್ತಸ್ರಾವದ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಅತಿಯಾದ ರಕ್ತಸ್ರಾವವು ದೇಹದಲ್ಲಿ ರಕ್ತದ ಕೊರತೆ ಸಹ ಉಂಟುಮಾಡಬಹುದು. ಋತುಚಕ್ರದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ ಮೆಗ್ನೀಸಿಯಮ್-ಕಬ್ಬಿಣದ ಭರಿತ ಆಹಾರಗಳ ಸೇವನೆಯನ್ನು ಹೆಚ್ಚಿಸಿ.
ಅಶೋಕ ಮರದ ತೊಗಟೆ: ಭಾರೀ ರಕ್ತಸ್ರಾವವನ್ನು ನಿಲ್ಲಿಸಲು ಅಶೋಕ ಮರದ ತೊಗಟೆಯು ಬಹಳ ಪರಿಣಾಮಕಾರಿ. 50 ಗ್ರಾಂನಷ್ಟು ಅಶೋಕ ಮರದ ತೊಗಟೆಯನ್ನು 2 ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿಕೊಂಡು ಕುಡಿಯಿರಿ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ನಿಯಮಿತವಾಗಿ ಸೇವಿಸಿ.