
ಕೇಸರಿ : ಅತ್ಯುತ್ತಮ ಕೇಸರಿಗೆ ಕಾಶ್ಮೀರ ಇಡೀ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಉತ್ತಮ ಕೇಸರಿ ಸಿಗುವ ಜಾಗಗಳ ಪಟ್ಟಿಯಲ್ಲಿ ಸ್ಪೇನ್ ನಂತರದ ಸ್ಥಾನ ಕಾಶ್ಮೀರಕ್ಕಿದೆ. ಕೇಸರಿ ಚರ್ಮದ ಹೊಳಪನ್ನು ಹೆಚ್ಚಿಸಿ, ಸೌಂದರ್ಯವನ್ನು ಇಮ್ಮಡಿಗೊಳಿಸುವ ಶಕ್ತಿ ಹೊಂದಿದೆ. ಕಾಶ್ಮೀರದ ಬೆಡಗಿಯರು ಶ್ರೀಗಂಧದ ಪುಡಿ ಜೊತೆ ಕೇಸರಿಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ.
ಬಾದಾಮಿ : ಕಾಶ್ಮೀರಿ ಹುಡುಗಿಯರು ಸೌಂದರ್ಯ ವೃದ್ಧಿಗೆ ಬಾದಾಮಿಯನ್ನು ಉಪಯೋಗಿಸ್ತಾರೆ. ನೀವು ಕೂಡ ಮಾರುಕಟ್ಟೆಯಲ್ಲಿ ಸಿಗುವ ಬಾದಾಮಿಯಿಂದ ನಿಮ್ಮ ಮುಖ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ನಾಲ್ಕರಿಂದ ಐದು ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಬೇಕು. ನಂತ್ರ ಅದಕ್ಕೆ ಹಾಲು ಸೇರಿಸಿ ತರಿತರಿಯಾದ ಪೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಬೇಕು. ಹೀಗೆ ಮಾಡುವುದರಿಂದ ಡೆಡ್ ಸ್ಕಿನ್ ದೂರವಾಗುವುದಲ್ಲದೆ, ಚರ್ಮ ಕಾಂತಿ ಪಡೆಯುತ್ತದೆ.
ವಾಲ್ನೆಟ್ಸ್ : ಕಾಶ್ಮೀರ ಬೆಡಗಿಯರು ಕೂದಲಿನ ಸೌಂದರ್ಯಕ್ಕೆ ವಾಲ್ನೆಟ್ಸ್ ಬಳಸ್ತಾರೆ. ವಾಲ್ನೆಟ್ಸ್ ನಲ್ಲಿ ಒಮೆಗಾ -3, ಒಮೆಗಾ -6 ಹಾಗೂ ಒಮೆಗಾ-9 ಮತ್ತು ಸಾಕಷ್ಟು ಕೊಬ್ಬಿನಾಮ್ಲಗಳಿರುತ್ತವೆ. ಅವು ಕೂದಲು ಹೇರಳವಾಗಿ, ಉದ್ದವಾಗಿ ಹಾಗೂ ಕಪ್ಪಗೆ ಬೆಳೆಯಲು ಸಹಾಯವಾಗುತ್ತದೆ.