ಜಿರಳೆ ಹೆಸ್ರು ಕೇಳಿದ್ರೆ ಕೆಲವರು ವಾಂತಿ ಮಾಡಿಕೊಳ್ತಾರೆ. ಜಿರಳೆಗೆ ಹೆದರಿ ಓಡಿ ಹೋಗುವವರಿದ್ದಾರೆ. ಜಿರಳೆ ಮನೆಯಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜಿರಳೆ ಬಗ್ಗೆ ಅನೇಕ ಆಸಕ್ತಿದಾಯಕ ವಿಷ್ಯಗಳು ಇಲ್ಲಿವೆ.
ಚೀನಾ ಹಾಗೂ ಥೈಲ್ಯಾಂಡ್ ನಲ್ಲಿ ಜಿರಳೆಯನ್ನು ಹುರಿದು ತಿನ್ನಲಾಗುತ್ತದೆ.
ಎಲ್ಲ ಜಿರಳೆಗಳು ಮನುಷ್ಯನಂತೆ ನೆರೆಹೊರೆ ಜಿರಳೆಗಳ ಜೊತೆ ಸಂಬಂಧ ಹೊಂದಿರುತ್ತವೆ. ಅನೇಕ ದಿನಗಳ ಕಾಲ ಒಂಟಿಯಾಗಿರುವ ಜಿರಳೆ ಅನಾರೋಗ್ಯಕ್ಕೊಳಗಾಗುತ್ತದೆ.
ಇತ್ತೀಚಿಗೆ ಜಿರಳೆಯ ಕೆಲ ಜಾತಿಗಳನ್ನು ಪತ್ತೆ ಮಾಡಲಾಗಿದೆ. ಘನೀಕರಿಸಿದ ತಾಪಮಾನದಲ್ಲಿಯೂ ಆ ಜಾತಿಯ ಜಿರಳೆ ಜೀವಿಸುತ್ತವೆ.
ಜಿರಳೆಯನ್ನು ಬಾಹ್ಯಾಕಾಶಕ್ಕೆ ಬಿಟ್ಟರೆ ಅವು ಭೂಮಿಯಲ್ಲಿರುವ ಜಿರಳೆಗಳಿಗಿಂತ ಹೆಚ್ಚು ಶಕ್ತಿಶಾಲಿ ಹಾಗೂ ವೇಗವನ್ನು ಪಡೆಯುತ್ತವೆ.
ಒಂದು ಜಿರಳೆ 40 ನಿಮಿಷಗಳ ಕಾಲ ತನ್ನ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಾಗಾಗಿಯೇ ಅವು 30 ನಿಮಿಷಗಳ ಕಾಲ ನೀರಿನಲ್ಲಿ ಇರಬಲ್ಲವು.
ಜಿರಳೆ ಸರಾಸರಿ ಜೀವಿತಾವಧಿ 1 ವರ್ಷ. ಜಿರಳೆ ಯೌವನಕ್ಕೆ ಬರಲು 4 ತಿಂಗಳು ಬೇಕು.
ಜಿರಳೆ ಗುಂಪು ಒಟ್ಟಾಗಿ ಸೇರಿ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 50 ಜಿರಳೆ ವಾಸಿಸಲು ಮೂರು ಜಾಗಗಳಿದ್ದರೆ ಎರಡು ಜಾಗವನ್ನು 25-25 ರಂತೆ ಹಂಚಿಕೊಂಡು ಒಂದನ್ನು ಖಾಲಿ ಬಿಡುತ್ತವೆ.
ಎಲ್ಲ ಜಿರಳೆಗಳ ವ್ಯಕ್ತಿತ್ವ ಒಂದೇ ರೀತಿ ಇರುವುದಿಲ್ಲ. ಮನುಷ್ಯರಂತೆ ಬೇರೆ ಬೇರೆ ಜಿರಳೆಗಳ ವ್ಯಕ್ತಿತ್ವ ಬೇರೆ ಬೇರೆಯಾಗಿರುತ್ತದೆ.
ಗಂಡು ಜಿರಳೆ ಹೆಣ್ಣು ಜಿರಳೆಗಿಂತ ಚಿಕ್ಕದಾಗಿರುತ್ತದೆ. ಜಿರಳೆ ಹಾಗೂ ಹಲ್ಲಿ ಪರಸ್ಪರ ಶತ್ರುಗಳು.