ತೂಕ ನಷ್ಟ ಮಾಡಿಕೊಳ್ಳು ಬಹಳ ಉತ್ತಮವಾದ, ಸುಲಭವಾದ ವಿಧಾನವೆಂದರೆ ನೀರಿನ ಉಪವಾಸ ಮಾಡುವುದು. ಅಂದರೆ ಆಹಾರ ಸೇವಿಸದೆ ಬರೀ ನೀರಿನಿಂದ ಹೊಟ್ಟೆ ತುಂಬಿಸಿಕೊಳ್ಳುವುದು. ನೀವು ಈ ವಿಧಾನವನ್ನು ಅನುಸರಿಸುವುದಾದರೆ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
ನೀರಿನ ಉಪವಾಸವೆಂದರೆ ನೀವು ಆಹಾರ ಸೇವಿಸುವ ವೇಳೆಯಲ್ಲಿ ಆಹಾರವನ್ನು ತ್ಯಜಿಸಿ ನೀರನ್ನು ಮಾತ್ರ ಸೇವಿಸುವುದು. ಆ ವೇಳೆ ಹಣ್ಣಿನ ರಸ, ಚಹಾ, ಕಾಫಿಯನ್ನು ಕೂಡ ಸೇವಿಸಬಾರದು. ಈ ಉಪವಾಸ ಕನಿಷ್ಠ 24 ಗಂಟೆಯಿಂದ ಗರಿಷ್ಠ 72 ಗಂಟೆಗಳ ಕಾಲ ಮಾಡಬಹುದು. ಆದರೆ 72 ಗಂಟೆಗಳ ನಂತರ ಮುಂದುವರಿಸಿದರೆ ಬಹಳ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಒಂದು ವೇಳೆ ನಿಮಗೆ ಇದರಿಂದ ವಾಕರಿಕೆ, ತಲೆತಿರುಗುವಿಕೆಯಂತಹ ಅಡ್ಡ ಪರಿಣಾಮಗಳು ಕಂಡು ಬಂದರೆ ತಕ್ಷಣ ಉಪವಾಸವನ್ನು ಕೊನೆಗೊಳಿಸಿ ಹಣ್ಣಿನ ರಸ ಅಥವಾ ಘನ ಆಹಾರ ಸೇವಿಸಿ. ಹಾಗೇ ಘನ ಆಹಾರ ಸೇವಿಸುವ ಮೊದಲು ಯಾವುದಾದರೂ ದ್ರವ ರೂಪದ ಆಹಾರ ಸೇವಿಸಿ.