ಆರೋಗ್ಯವಾಗಿರಲು ಸಮತೋಲನ ಆಹಾರ ಅತ್ಯಗತ್ಯ. ಹಾಗೇ ಕ್ಯಾಲೋರಿ ಕೂಡ ಮುಖ್ಯವಾಗಿದೆ. ಕ್ಯಾಲೋರಿ ನಮ್ಮ ತೂಕವನ್ನು ನಿಯಂತ್ರಿಸುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳುವವರು ಕಡಿಮೆ ಕ್ಯಾಲೋರಿ ಆಹಾರಗಳನ್ನು ಸೇವಿಸಬೇಕು. ಹಾಗಾಗಿ ಕ್ಯಾಲೋರಿ ಕಡಿಮೆ ಇರುವ ಹಣ್ಣುಗಳು ಮತ್ತು ತರಕಾರಿಗಳ ಪಟ್ಟಿ ಇಲ್ಲಿದೆ ನೋಡಿ.
* ಕಡಿಮೆ ಕ್ಯಾಲೋರಿ ಹಣ್ಣುಗಳು : 100ಗ್ರಾಂ ಸೇಬು ಹಣ್ಣಿನಲ್ಲಿ 52 ಕ್ಯಾಲೋರಿ, 100ಗ್ರಾಂ ಅನಾನಸ್ ನಲ್ಲಿ 50 ಕ್ಯಾಲೋರಿ, 100ಗ್ರಾಂ ಸ್ಟ್ರಾಬೆರಿಯಲ್ಲಿ 33 ಕ್ಯಾಲೋರಿ, 28 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ 9 ಕ್ಯಾಲೋರಿ ಇದೆ.
ʼಮೊಳಕೆʼ ಕಾಳಿನ ಬ್ರೇಕ್ ಫಾಸ್ಟ್ ಬೆಸ್ಟ್
* ಕಡಿಮೆ ಕ್ಯಾಲೋರಿ ತರಕಾರಿಗಳು : 100ಗ್ರಾಂ ಸೌತೆಕಾಯಿಯಲ್ಲಿ 16 ಕ್ಯಾಲೋರಿ, 100ಗ್ರಾಂ ಈರುಳ್ಳಿಯಲ್ಲಿ 40 ಕ್ಯಾಲೋರಿ, 100ಗ್ರಾಂ ಟೊಮೆಟೊದಲ್ಲಿ 18 ಕ್ಯಾಲೋರಿ, 100ಗ್ರಾಂ ಕ್ಯಾರೆಟ್ ನಲ್ಲಿ 41 ಕ್ಯಾಲೋರಿ, 100ಗ್ರಾಂ ಲಿಂಬೆಯಲ್ಲಿ 29 ಕ್ಯಾಲೋರಿ, 100ಗ್ರಾಂ ಹೂಕೋಸಿನಲ್ಲಿ 36 ಕ್ಯಾಲೋರಿ, 100ಗ್ರಾಂ ಕೋಸುಗಡ್ಡೆಯಲ್ಲಿ 34 ಕ್ಯಾಲೋರಿ, 100ಗ್ರಾಂ ಬೀನ್ಸ್ ನಲ್ಲಿ 31 ಕ್ಯಾಲೋರಿ ಇದೆ.