ಬಳ್ಳಾರಿ : ಮೆಣಸಿನಕಾಯಿ ಬೆಳೆಯುವ ರೈತರು ಪರ್ಯಾಯ ಬೆಳೆ ಬೆಳೆಯಲು ಜಿಪಂ ತೋಟಗಾರಿಕೆ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿರುತ್ತದೆ. ಇತ್ತೀಚೆಗೆ ನಡೆದ ತುಂಗಭದ್ರಾ ಯೋಜನೆಯ 119ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ.30 ರವರೆಗೆ ಕಾಲುವೆಗೆ ನೀರನ್ನು ಒದಗಿಸಲಾಗುವುದೆಂದು ನಿರ್ಧರಿಸಿದ್ದು, ಜಿಲ್ಲೆಯ ರೈತರು ಮೆಣಸಿನಕಾಯಿ ಬೆಳೆಯ ಬದಲು ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದಂತಹ ತೋಟಗಾರಿಕೆ ಬೆಳೆಗಳಾದ ಬೆಂಡಿ, ಹೀರೆಕಾಯಿ, ಸೌತೆಕಾಯಿ, ಸೋರೆಕಾಯಿ, ತಪ್ಪರೆಕಾಯಿ ಹಾಗಲಕಾಯಿ, ಬೀನ್ಸ್ ಮತ್ತು ಸೊಪ್ಪು ಬೆಳೆಗಳಾದ ಮೆಂತಿ ಮತ್ತು ಕೊತ್ತಂಬರಿ ಬೆಳೆಗಳನ್ನು ಪರ್ಯಾಯವಾಗಿ ಬೆಳೆಯಬಹುದು ಎಂದು ಜಿಪಂ ತೋಟಗಾರಿಕೆ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.