ಚೀನಾ ಜನರು ಶತಮಾನಗಳಿಂದ ಫೆಂಗ್ ಶುಯಿಯನ್ನು ಅನುಸರಿಸುತ್ತ ಬಂದಿದ್ದಾರೆ. ವಾಸ್ತವವಾಗಿ ಫೆಂಗ್ ಶುಯಿ ಒಂದು ಪ್ರಾಚೀನ ಕಲೆಯಾಗಿದೆ. ಸುತ್ತಮುತ್ತ ಪ್ರದೇಶ, ಮನೆ, ಮನಸ್ಸಿನ ಶಾಂತಿ, ಸಮೃದ್ಧಿ, ಸಕಾರಾತ್ಮಕ ಶಕ್ತಿ ವೃದ್ಧಿ ಸೇರಿದಂತೆ ಅನೇಕ ವಿಷ್ಯಗಳು ಫೆಂಗ್ ಶುಯಿಯಲ್ಲಿ ಅಡಗಿದೆ. ಮನೆಯಲ್ಲಿ ಪ್ರೀತಿ ಹೆಚ್ಚಿಸುವುದು ಹೇಗೆ ಹಾಗೂ ಸಂಗಾತಿ ಹುಡುಕಾಟಕ್ಕೂ ಫೆಂಗ್ ಶುಯಿ ನೆರವಾಗುತ್ತದೆ.
ಮನೆಯಲ್ಲಿ ಎಂದೂ ಒಂಟಿಯಾಗಿ ವಸ್ತುಗಳನ್ನು ಇಡಬೇಡಿ. ಪೀಠೋಪಕರಣ, ಫೋಟೋ, ವಿಗ್ರಹ ಯಾವುದೇ ಇದ್ರು ಜೋಡಿಯಾಗಿಡಿ.
ಮನೆಯ ನೈರುತ್ಯ ಭಾಗ ಪ್ರೀತಿಯ ಸಂಕೇತ. ಹಾಗಾಗಿ ಈ ಭಾಗವನ್ನು ಸದಾ ಸುಂದರವಾಗಿ, ಸ್ವಚ್ಛವಾಗಿಡಿ.
ಕೋಣೆಯ ಮಧ್ಯ ಭಾಗವನ್ನು ಖಾಲಿ ಇಡಿ.
ಬಟ್ಟೆ ಹಾಗೂ ಚಪ್ಪಲಿಯನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿಡಬೇಕು.
ಕನ್ನಡಿಯನ್ನು ಪೂರ್ವ ಅಥವಾ ಉತ್ತರ ದಿಕ್ಕಿನ ಗೋಡೆಗೆ ಹಾಕಿ.
ಮನೆಯಲ್ಲಿರುವ ಸುಂದರ ಹೂದಾನಿ ಮನಸ್ಸಿಗೆ ಖುಷಿ ನೀಡುತ್ತದೆ. ಪ್ರೀತಿ ಸಂಕೇತದ ಹೂದಾನಿಗಳನ್ನು ಮನೆಯ ನೈರುತ್ಯ ದಿಕ್ಕಿನಲ್ಲಿಡಿ.