ದೇಶದಲ್ಲಿ ಹೊಸ ಸಂಚಲನ ಮೂಡಿಸಿರುವ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಓಲಾ ಎಲೆಕ್ಟ್ರಿಕ್ ವಿಶೇಷ ಆಫರ್ ಪ್ರಕಟಿಸಿ ಗಮನ ಸೆಳೆಯುತ್ತಿದೆ. ಒಂದೇ ಚಾರ್ಜ್‌ನಲ್ಲಿ 200 ಕಿಮೀ ವ್ಯಾಪ್ತಿಯನ್ನು ಪೂರೈಸುವ ಗ್ರಾಹಕರಿಗೆ ಉಚಿತ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ನೀಡುವುದಾಗಿ ಘೋಷಿಸಿದೆ.
ಒಂದೇ ಚಾರ್ಜ್‌ನಲ್ಲಿ 200 ಕಿಮೀ ವ್ಯಾಪ್ತಿಯನ್ನು ದಾಟುವ 10 ಗ್ರಾಹಕರಿಗೆ ನಾವು ಉಚಿತವಾಗಿ ಸ್ಕೂಟರ್ ಅನ್ನು ನೀಡುತ್ತೇವೆ. ಈಗಾಗಲೇ ಇಬ್ಬರು ಈ ಗುರಿ ತಲುಪಿದವರಿದ್ದಾರೆ. ಯಾರಾದರೂ ಈ ಗುರಿ ಸಾಧಿಸಬಹುದು.
ಉಚಿತ ಸ್ಕೂಟರ್ ಅನ್ನು ಜೂನ್‌ನಲ್ಲಿ ತಮಿಳುನಾಡಿನ ಕಂಪನಿಯ ಫ್ಯೂಚರ್ ಫ್ಯಾಕ್ಟರಿಯಲ್ಲಿ ವಿತರಿಸಲಾಗುವುದು ಎಂದು ಓಲಾ ಸ್ಕೂಟರ್ ಅಧ್ಯಕ್ಷ
ಮತ್ತು ಗ್ರೂಪ್ ಸಿಇಒ ಭವಿಶ್ ಅಗರ್ವಾಲ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಓಲಾ ತನ್ನ S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನ ಆವೃತ್ತಿಯನ್ನು ಹೋಳಿ ಹಬ್ಬದ ವೇಳೆ ಬಿಡುಗಡೆ ಮಾಡಿತು.
BIG NEWS: ಮದುವೆ ಮೆರವಣಿಗೆಯಲ್ಲಿ ಕನ್ನಡದ ಹಾಡು; ಎಂಇಎಸ್ ನಿಂದ ದಾಂಧಲೆ; ವಧು-ವರರ ಮೇಲೆ ಹಲ್ಲೆ
ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿಯ ಇತ್ತೀಚಿನ ಘಟನೆಯ ಬಳಿಕ ಜನರ ವಿಶ್ವಾಸ ಗಳಿಸಲು ಪ್ರಯತ್ನ ನಡೆಸಿದ್ದು, ಓಲಾ ಕಡೆಯಿಂದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಹಾಗೆಯೇ ಹೊಸ ಖರೀದಿದಾರರಿಗೆ ವಾಹನ ವಿತರಣೆಗೆ ವೇಗ ನೀಡಲಾಗಿದೆ.