ರಾಯಿತಾ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ರೈಸ್ ಬಾತ್ ಮಾಡಿದರೆ ಈ ರಾಯಿತಾ ಇದ್ದರೆ ಬಹಳ ಚೆನ್ನಾಗಿರುತ್ತದೆ. ಇಲ್ಲಿ ಬೂಂದಿ ರಾಯಿತಾ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಗನೆ ಆಗುತ್ತದೆ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಖಾರಾಬೂಂದಿ, 1 ಕಪ್ – ಮೊಸರು, ½ ಟೀ ಸ್ಪೂನ್ – ಚಾಟ್ ಮಸಾಲ, ¼ ಟೀ ಸ್ಪೂನ್ – ಖಾರದ ಪುಡಿ, 1/4 ಟೀ ಸ್ಪೂನ್ – ಜೀರಿಗೆ ಪುಡಿ, 3 ಟೇಬಲ್ ಸ್ಪೂನ್ – ನೀರು, ಸ್ವಲ್ಪ – ಕೊತ್ತಂಬರಿಸೊಪ್ಪು, ಉಪ್ಪು – ರುಚಿಗೆ ತಕ್ಕಷ್ಟು, ನೀರು ಅಗತ್ಯವಿರುವಷ್ಟು.
ಮಾಡುವ ವಿಧಾನ:
ಮೊದಲಿಗೆ ನೀರು ಬಿಸಿ ಮಾಡಿಕೊಂಡು ಅದಕ್ಕೆ ಬೂಂದಿ ಹಾಕಿಕೊಂಡು 10 ನಿಮಿಷ ನೆನೆಸಿಕೊಳ್ಳಿ.
ಮೊಸರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಚಾಟ್ ಮಸಾಲ, ಜೀರಿಗೆ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಬೂಂದಿಯಲ್ಲಿರುವ ನೀರನ್ನು ಬಸಿದುಕೊಂಡು ಬೂಂದಿಯನ್ನು ಈ ಮೊಸರಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ತುಂಬಾ ದಪ್ಪಗಾಗಿದ್ದರೆ ನೀರು ಮಿಕ್ಸ್ ಮಾಡಿ. ನಂತರ ಕೊತ್ತಂಬರಿಸೊಪ್ಪು ಸೇರಿಸಿ ಸರ್ವ್ ಮಾಡಿ.